ಕರ್ನಾಟಕ

karnataka

ಪಂಜಾಬ್, ಹರಿಯಾಣದಲ್ಲಿ ಎಂಎಸ್​​ಪಿಯಡಿ 3 ದಿನಗಳಲ್ಲಿ 44,809 ಮೆಟ್ರಿಕ್ ಟನ್ ಭತ್ತ ಖರೀದಿ

By

Published : Sep 30, 2020, 9:00 PM IST

ರಾಜ್ಯಗಳ ಪ್ರಸ್ತಾಪದ ಆಧಾರದಲ್ಲಿ 2020ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ 14.09 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಗಳನ್ನು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣದಿಂದ ದಾಸ್ತಾನು ಮಾಡಲು ಅನುಮೋದನೆ ನೀಡಲಾಗಿದೆ. ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ದಾಸ್ತಾನಿಗೆ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ ಅನುಮೋದನೆ ನೀಡಲಾಗುತ್ತದೆ.

Kharif Paddy
ಭತ್ತ

ನವದೆಹಲಿ: 2020-21ನೇ ಸಾಲಿನ ಮುಂಗಾರು ಮಾರುಕಟ್ಟೆ ಋತು ಈಗಷ್ಟೇ ಆರಂಭವಾಗಿದ್ದು, ಕೇಂದ್ರವು 2020-21ನೇ ಮುಂಗಾರು ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್​​ಪಿ) ರೈತರಿಂದ ಖರೀದಿ ಆರಂಭಿಸಿದೆ.

ರಾಜ್ಯಗಳ ಪ್ರಸ್ತಾಪದ ಆಧಾರದಲ್ಲಿ 2020ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ 14.09 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಗಳನ್ನು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣದಿಂದ ದಾಸ್ತಾನು ಮಾಡಲು ಅನುಮೋದನೆ ನೀಡಲಾಗಿದೆ. ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ದಾಸ್ತಾನಿಗೆ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ ಅನುಮೋದನೆ ನೀಡಲಾಗುತ್ತದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

2020ರ ಸೆ.29ರವರೆಗೆ ಸರ್ಕಾರ ತನ್ನ ನೋಡಲ್ ಸಂಸ್ಥೆಗಳ ಮೂಲಕ 46.35 ಮೆಟ್ರಿಕ್​ ಟನ್​​ಗಳಷ್ಟು ಹೆಸರು ಕಾಳನ್ನು 33 ಲಕ್ಷ ಎಂಎಸ್​​ಪಿಯಲ್ಲಿ ಖರೀದಿಸಲಾಗಿದ್ದು, ತಮಿಳುನಾಡಿನ 48 ರೈತರಿಗೆ ಅನುಕೂಲವಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ ಮಂಜೂರಾಗಿದ್ದ 1.23 ಲಕ್ಷ ಮೆಟ್ರಿಕ್ ಟನ್​ಗ ಪ್ರತಿಯಾಗಿ 5,089 ಮೆಟ್ರಿಕ್ ಟನ್​ ಕೊಬ್ಬರಿ (ದೀರ್ಘಕಾಲೀನ ಬೆಳೆ) 52.40 ಕೋಟಿ ಎಂಎಸ್​​ಪಿ. ಮೌಲ್ಯದಲ್ಲಿ ಖರೀದಿಸಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ 3,961 ರೈತರಿಗೆ ಇದರ ಪ್ರಯೋಜನವಾಗಿದೆ.

ಮುಂಗಾರು ಮಾರುಕಟ್ಟೆ ಋತು 2020-21ರ ಅವಧಿಯಲ್ಲಿ ಭತ್ತ ಖರೀದಿಯನ್ನು 2020ರ ಸೆಪ್ಟೆಂಬರ್ 26ರಿಂದ ಹರಿಯಾಣ ಮತ್ತು ಪಂಜಾಬ್​ನಲ್ಲಿ ಆರಂಭಿಸಲಾಗಿದೆ. 2020ರ ಸೆ.29ರವರೆಗೆ 3,506 ಮೆಟ್ರಿಕ್​ ಟನ್ ಭತ್ತವನ್ನು ಹರಿಯಾಣದಲ್ಲಿ ಮತ್ತು 41,3030 ಮೆಟ್ರಿಕ್ ಟನ್ ಪಂಜಾಬ್​ನಲ್ಲಿ ಖರೀದಿಸಲಾಗಿದೆ. 44,809 ಎಂಟಿ ಭತ್ತಕ್ಕೆ ಪ್ರತಿ ಕ್ವಿಂಟಾಲ್​ಗೆ 1,888 ರೂ. ನಿಗದಿಪಡಿಸಿದ್ದರಿಂದ 2,950 ರೈತರಿ ಅನುಕೂಲವಾಗಿದೆ. 84.60 ಕೋಟಿ ರೂ. ಎಂಎಸ್​​ಪಿ ಮೌಲ್ಯದಲ್ಲಿ ದಾಸ್ತಾನು ಮಾಡಲಾಗಿದೆ.

2020-21ರ ಸಾಲಿನಲ್ಲಿ ಹತ್ತಿಯ ದಾಸ್ತಾನು 2020ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಭಾರತೀಯ ಹತ್ತಿ ನಿಗಮ (ಸಿಸಿಐ) ಎಫ್ಎಕ್ಯು ದರ್ಜೆಯ ಹತ್ತಿಯನ್ನು 2020ರ ಅಕ್ಟೋಬರ್ 1ರ ತರುವಾಯ ಖರೀದಿಸಲು ಆರಂಭಿಸಲಿದೆ.

ABOUT THE AUTHOR

...view details