ಹೈದರಾಬಾದ್: ಇಂಟರ್ನೆಟ್ ಆಧರಿತ ವೀಡಿಯೊ ಕಾನ್ಫರೆನ್ಸಿಂಗ್ ಈಗ ಎಲ್ಲೆಡೆ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಕೊರೊನಾ ಭೀತಿಯಿಂದ ಲಾಕ್ಡೌನ್ ವಿಸ್ತರಣೆಯಾಗುತ್ತಿದ್ದಂತೆ ವಿಡಿಯೋ ಕಾನ್ಫರೆನ್ಸಿಂಗ್ ಸೇರಿದಂತೆ ಮೀಟ್ ಅಪ್ಲಿಕೇಶನ್ಗಳನ್ನು ಬಳಸುವವರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಗೂಗಲ್ ತನ್ನ ಮೀಟ್ ಅಪ್ಲಿಕೇಶನ್‌ನಲ್ಲಿ ಪ್ರತಿದಿನ ಸುಮಾರು 30 ಲಕ್ಷ ಹೊಸ ಬಳಕೆದಾರರನ್ನು ಸೇರಿಸುತ್ತಿದೆಯಂತೆ. ವಿಶೇಷವಾಗಿ ಜನವರಿಯಿಂದ ಈ ಆ್ಯಪ್ಗಳ ಬಳಕೆಯಲ್ಲಿ ಸುಮಾರು 30 ಪಟ್ಟು ಹೆಚ್ಚಳವಾಗಿದೆ. ಆಲ್ಫಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರ ಪ್ರಕಾರ, ಈಗ ಪ್ರತಿದಿನ 10 ಕೋಟಿ ಜನ ಮೀಟ್ ಆ್ಯಪ್ಗಳಲ್ಲಿ ಭಾಗಿಯಾಗುತ್ತಿದ್ದಾರೆ.
10 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಣತಜ್ಞರು ಗೂಗಲ್ ತರಗತಿಯನ್ನು ಬಳಸುತ್ತಿದ್ದಾರೆ. ಈ ಸಂಖ್ಯೆ ಮಾರ್ಚ್ ಆರಂಭದಿಂದ ದ್ವಿಗುಣಗೊಂಡಿದೆ. ಕ್ರೋಮ್‌ಬುಕ್‌ಗಳ ಬೇಡಿಕೆಯಲ್ಲೂ ಭಾರಿ ಹೆಚ್ಚಳ ಕಂಡಿದ್ದೇವೆ. ವಿಶೇಷವಾಗಿ ಶಾಲೆಗಳು ಮತ್ತು ಕೆಲ ವ್ಯವಹಾರಗಳು ನಮ್ಮ ಸುರಕ್ಷಿತ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಮೀಟ್ಅನ್ನು ಬಳಸುತ್ತಿವೆ ಎಂದು ಪಿಚ್ಚೈ ಹೇಳಿದ್ದಾರೆ.
ಫೆಬ್ರವರಿಯಿಂದ ಮಾರ್ಚ್‌ವರೆಗೆ ಗೂಗಲ್ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್‌ಗಳ ಡೌನ್‌ಲೋಡ್‌ಗಳು ಶೇ. 30 ರಷ್ಟು ಏರಿಕೆಯೊಂದಿಗೆ ಜನರು ತಮ್ಮ ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಗಮನಾರ್ಹವಾಗಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಯೂಟ್ಯೂಬ್ ವೀಕ್ಷಣೆ ಸಮಯವೂ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಪಿಚ್ಚೈ ತಿಳಿಸಿದ್ದಾರೆ.