ಕರ್ನಾಟಕ

karnataka

ETV Bharat / business

ಚಿನ್ನ 239 ರೂ. ಇಳಿಕೆ, ಬೆಳ್ಳಿ ಬೆಲೆಯೂ ಕುಸಿತ - ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾದ ಕಾರಣದಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

Gold tanks Rs 239; silver tumbles Rs 723
ದೇಶದಲ್ಲಿ ಚಿನ್ನದ 239 ರೂ. ಇಳಿಕೆ, ಬೆಳ್ಳಿಯ ಬೆಲೆಯೂ ಕುಸಿತ

By

Published : Feb 19, 2021, 5:29 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 239 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಮ್​​ಗೆ ​ 45,568 ರೂ. ಆಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ, ಬಂಗಾರದ ಬೆಲೆ 10 ಗ್ರಾಂಗೆ 45,807 ರೂಪಾಯಿ ಇತ್ತು.

ಬೆಳ್ಳಿಯ ಬೆಲೆಯೂ ಇಳಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ 723 ರೂಪಾಯಿ ಇಳಿಕೆಯಾಗಿದ್ದು, 67,370 ರೂಪಾಯಿಗೆ ತಲುಪಿದೆ. ಹಿಂದಿನ ದಿನ ಬೆಳ್ಳಿಯ ಬೆಲೆ ಒಂದು ಕೆ.ಜಿಗೆ 68,093 ರೂಪಾಯಿ ಇತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,774 ಅಮೆರಿಕನ್ ಡಾಲರ್ ಮತ್ತು ಬೆಳ್ಳಿ ಔನ್ಸ್​ಗೆ 26.94 ಡಾಲರ್‌ಗಳಷ್ಟಿದೆ.

ABOUT THE AUTHOR

...view details