ಕರ್ನಾಟಕ

karnataka

ETV Bharat / business

Gold price: ಆಭರಣ ಪ್ರಿಯರಿಗೆ ದೀಪಾವಳಿ ಸಿಹಿ ಸುದ್ದಿ; ಚಿನ್ನಾಭರಣ ಬೆಲೆ ಇಳಿಕೆ - ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಚಿನ್ನಾಭರಣ ಪ್ರಿಯರಿಗೆ ದೀಪಾವಳಿಯ ಸಿಹಿ ಸುದ್ದಿ ಸಿಕ್ಕಿದ್ದು, ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 250 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 270 ರೂಪಾಯಿ ಇಳಿಕೆಯಾಗಿದೆ.

Gold rates today in Hyderabad, Bangalore, Kerala, Visakhapatnam slashes - 04 November 2021
Gold price: ಚಿನ್ನದ ಪ್ರಿಯರಿಗೆ ದೀಪಾವಳಿ ಸಿಹಿ ಸುದ್ದಿ; ಚಿನ್ನಾಭರಣ ಬೆಲೆ ಇಳಿಕೆ

By

Published : Nov 4, 2021, 1:03 PM IST

ಹೈದರಾಬಾದ್‌: ಚಿನಿವಾರ ಪೇಟೆಯಲ್ಲಿಂದು ಕೂಡ ಚಿನ್ನಾಭರಣಗಳ ಬೆಲೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 250 ರೂಪಾಯಿ ಇಳಿಕೆಯಾಗಿ 44,800 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 270 ರೂಪಾಯಿ ಕಡಿತದ ಬಳಿಕ 48,600 ರೂಪಾಯಿಗೆ ಇಳಿದಿದೆ.

ಇತ್ತ ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ಮೇಲೆ 250 ರೂ. ಇಳಿದಿದ್ದು, 44,500 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರದ ಮೇಲೆ 270 ರೂ. ಕುಸಿತವಾಗಿ 48,600ಗೆ ಮಾರಾಟವಾಗುತ್ತಿದೆ.

ವಿಶಾಖಪಟ್ಟಣಂನಲ್ಲಿ ಚಿನ್ನದ ದರ ಇದೇ ರೀತಿಯ ಇಳಿಕೆ ಕಂಡಿದ್ದು, 22 ಕ್ಯಾರೆಟ್‌ನ 10 ಗ್ರಾಂಗೆ 44,550 ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 48,600 ರೂಪಾಯಿ ಇದೆ. ನೆರೆಯ ಕೇರಳದಲ್ಲೂ ಪ್ರತಿ 10 ಗ್ರಾಂ 22-ಕ್ಯಾರೆಟ್ ಚಿನ್ನದ ದರ 44,550 ರೂ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48.600 ರೂ.ಇದೆ.

ಹೈದರಾಬಾದ್, ವಿಶಾಖಪಟ್ಟಣಂ, ಕೇರಳದಲ್ಲಿ ಒಂದು ಕೆಜಿ ಬೆಳ್ಳಿಗೆ 67,600 ರೂ. ಇದ್ದರೆ ಬೆಂಗಳೂರಿನಲ್ಲಿ ಬೆಳ್ಳಿ ದರ 62,400 ರೂಪಾಯಿ ಇದೆ.

ABOUT THE AUTHOR

...view details