ಕರ್ನಾಟಕ

karnataka

ETV Bharat / business

Today Gold Rate: ಬಂಗಾರ ಮತ್ತಷ್ಟು ತುಟ್ಟಿ.. ಚಿನ್ನಾಭರಣ ಪ್ರಿಯರಿಗೆ ಶಾಕ್​ - Gold rate hike in market

ಸೋಮವಾರ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂಪಾಯಿ ಹೆಚ್ಚಳ ಕಂಡರೆ, ಬೆಳ್ಳಿ ಕೆಜಿಗೆ 505 ರೂಪಾಯಿ ಹೆಚ್ಚಾಗಿ 61,005 ರಿಂದ 61,510 ಕ್ಕೆ ಬಿಕರಿಯಾಗಿದೆ.

gold
ಚಿನಿವಾರ ಪೇಟೆ

By

Published : Jan 17, 2022, 4:48 PM IST

ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಡಾಲರ್​ ಮುಂದೆ ರೂಪಾಯಿ ದರ ಇಳಿಕೆ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತುಸು ಏರಿಕೆ ಕಂಡಿದೆ.

ಸೋಮವಾರ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂಪಾಯಿ ಹೆಚ್ಚಳ ಕಂಡು, 47,881 ರೂಪಾಯಿಗೆ ಬಿಕರಿಯಾಗಿದೆ. ನಿನ್ನೆ 47,705 ರೂಪಾಯಿಗೆ ಮಾರಾಟ ಕಂಡಿತ್ತು. ಇದಲ್ಲದೇ ಬೆಳ್ಳಿಯೂ ಕೂಡ ಕೆಜಿಗೆ 505 ರೂಪಾಯಿ ಹೆಚ್ಚಾಗಿ 61,005 ರಿಂದ 61,510 ಕ್ಕೆ ಮಾರಾಟವಾಗಿದೆ.

ಡಾಲರ್​ ಮುಂದೆ ರೂಪಾಯಿ ದರ ಮತ್ತೆ 9 ಪೈಸೆ ಕುಸಿದು 74.24 ರೂಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 1822 ಡಾಲರ್​ ಇದ್ದರೆ, 23.03 ಡಾಲರ್​ಗೆ ಬೆಳ್ಳಿ ಬಿಕರಿಯಾಗಿದೆ.

ಇದನ್ನೂ ಓದಿ:75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗೆ 75 ಯುದ್ಧ ವಿಮಾನಗಳ ಹಾರಾಟ

ABOUT THE AUTHOR

...view details