ಕರ್ನಾಟಕ

karnataka

ETV Bharat / business

ಚಿನ್ನದ ಬೆಲೆಯಲ್ಲಿ 422 ರೂ. ಏರಿಕೆ.. ಸತತ ಇಳಿಕೆ ನಂತರ ಶಾಕ್​ ನೀಡಿದ ಹಳದಿ ಲೋಹ!

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ದಿಢೀರ್​ ಏರಿಕೆ ಕಂಡು ಬಂದಿರುವ ಕಾರಣ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 422 ರೂ ಏರಿಕೆಯಾಗಿದೆ.

By

Published : Aug 12, 2021, 6:37 PM IST

Gold price
Gold price

ನವದೆಹಲಿ:ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಕೆ ಹಾದಿ ಹಿಡಿದಿದ್ದ ಹಳದಿ ಲೋಹದಲ್ಲಿ ಇಂದು ದಿಢೀರ್​ ಏರಿಕೆ ಕಂಡು ಬಂದಿದ್ದು, ಇದರಿಂದ ಆಭರಣ ಪ್ರಿಯರಿಗೆ ಶಾಕ್​​ ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 422 ರೂಪಾಯಿ ಏರಿಕೆಯಾಗಿದೆ. ಈ ಮೂಲಕ 45,560ರೂ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಮೇಲಿನ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು HDFC ಸೆಕ್ಯೂರಿಟಿಸ್​ ​ತಿಳಿಸಿದ್ದು, ಬೆಳ್ಳಿ ಬೆಲೆಯಲ್ಲೂ 113ರೂಪಾಯಿ ಏರಿಕೆ ಕಂಡು ಬಂದಿದೆ. ಈ ಮೂಲಕ ಪ್ರತಿ ಕೆಜಿ ಬೆಳ್ಳಿ ಬೆಲೆ ಸದ್ಯ 61,314 ರೂಪಾಯಿ ಆಗಿದೆ.

ಇದನ್ನೂ ಓದಿರಿ: ಅಂತ್ಯಕ್ರಿಯೆ ನಡೆಸಲು ಹಣವಿಲ್ಲ ಎಂದು ಫ್ರಿಡ್ಜ್​ನಲ್ಲಿ ಅಜ್ಜನ ಮೃತದೇಹವಿಟ್ಟ ಮೊಮ್ಮಗ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್​​ಗೆ USD 1,756 ಆಗಿದ್ದು, ಬೆಳ್ಳಿ ಬೆಳೆ USD 23.44 ಆಗಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡು ಬಂದಿತ್ತು. ಹೀಗಾಗಿ 10 ಗ್ರಾಂ ಚಿನ್ನದ ಬೆಲೆ 44 ಸಾವಿರ ಗಡಿಗೆ ಬಂದಿತ್ತು.

ABOUT THE AUTHOR

...view details