ಕರ್ನಾಟಕ

karnataka

ETV Bharat / business

ಚಿನ್ನದ ಮೇಲಿನ ಸಾಲ​ vs ವೈಯಕ್ತಿಕ​ ಸಾಲ​: ಎರಡರಲ್ಲಿ ಯಾವುದು ಉತ್ತಮ?

ಚಿನ್ನದ ವಿರುದ್ಧ ಸಾಲದ ಮೇಲೆ ಬ್ಯಾಂಕ್​ಗಳು ಬಡ್ಡಿ ದರವನ್ನು ಶೇ 7.5ರಷ್ಟರಿಂದ 25 ಪ್ರತಿಶತದಷ್ಟು ವಿಧಿಸುತ್ತವೆ. ಮರುಪಾವತಿ ಆಯ್ಕೆಗಳು ಸಾಕಷ್ಟು ಅನುಕೂಲಕರ ಆಗಿರುತ್ತವೆ. ಇಎಂಐ ಅಥವಾ ಜನಪ್ರಿಯವಾದವುಗಳಲ್ಲಿ ಒನ್​ ಟೈಮ್​ ಬುಲೆಟ್ ಮರುಪಾವತಿ ಅವಕಾಶ ನೀಡುತ್ತವೆ. ವೈಯಕ್ತಿಕ ಸಾಲಗಳು 1-3 ವರ್ಷಗಳ ದೀರ್ಘಾವಧಿಯೊಂದಿಗೆ ಬರುತ್ತವೆ. ವಿವಿಧ ಬಡ್ಡಿದರಗಳು ಸುಮಾರು 10 ಪ್ರತಿಶತದಿಂದ ಪ್ರಾರಂಭವಾಗುತ್ತವೆ. ಆದರೆ, ಸಾಲಗಾರರನ್ನು ಖಾತರಿದಾರರು ವ್ಯವಸ್ಥೆ ಮಾಡುವಂತೆ ಕೇಳಬಹುದು. ಸಾಲಗಾರನ ಪ್ರೊಫೈಲ್ ಖಚಿತಕ್ಕೆ ಸಾಕಷ್ಟು ದಾಖಲೆಗಳನ್ನು ಕೇಳುತ್ತದೆ. ಇದು ಚಿನ್ನದ ಸಾಲಕ್ಕಿಂತ ವಿತರಣಾ ಪ್ರಕ್ರಿಯೆಯನ್ನು ಹೆಚ್ಚು ದೀರ್ಘವಾಗಿರುತ್ತದೆ.

Loan
ಸಾಲ

By

Published : Jul 22, 2020, 9:13 PM IST

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿನ ಚಿನ್ನಾಭರಣದ ಮೇಲಿನ ಬೆಲೆ ಏರಿಕೆಯು ದೇಶಾದ್ಯಂತ ಜನರನ್ನು ಚಿನ್ನದ ಸಾಲಗಳತ್ತ ಮರಳಿ ಕರೆದೊಯ್ಯುತ್ತಿದೆ. ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ಸೀಮಿತ ಆದಾಯ ತಾವು ಎದುರಿಸುತ್ತಿರುವ ನಗದು ಬಿಕ್ಕಟ್ಟನ್ನು ಸರಾಗಗೊಳಿಸುವ ಸಲುವಾಗಿ ತಮ್ಮ ಹಳದಿ ಲೋಹವನ್ನು ಆಗಾಗ ಸಂಕಷ್ಟ ನಿವಾರಣೆಗೆ ಬಳಸಿಕೊಳ್ಳುತ್ತಾರೆ.

ಜುಲೈ ಆರಂಭದಲ್ಲಿ ಎಂಸಿಎಕ್ಸ್ ಚಿನ್ನವು 10 ಗ್ರಾಂ.ಗೆ 50,000 ರೂ.ಗೆ ತಲುಪಿದ ನಂತರ, ಚಿನ್ನದ ಅಡಮಾನ ಸಂಸ್ಥೆ ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತೂಟ್​ ಮಾತನಾಡಿ, ಸಾಂಕ್ರಾಮಿಕ ರೋಗದ ಮಧ್ಯೆ ಕಂಪನಿಯ ಚಿನ್ನದ ಸಾಲ ವ್ಯವಹಾರವು ಸಾಮಾನ್ಯ ಸ್ಥಿತಿಗೆ ಮರಳಿದೆ. ಸಣ್ಣ ಉದ್ಯಮಗಳು ಮತ್ತು ಅಂಗಡಿ ವರ್ತಕರು ಬಂಡವಾಳದ ಅಗತ್ಯದತ್ತ ಮುಖ ಮಾಡಿದ್ದಾರೆ ಎಂದರು.

ಸಾಮಾನ್ಯ ವ್ಯಕ್ತಿಗಳಿಗೆ ಸಣ್ಣ ಹಣದ ಅಗತ್ಯವಿರುವಾಗ 10,000 ರಿಂದ 20 ಲಕ್ಷ ರೂ. ಮೊತ್ತಕ್ಕೆ ಚಿನ್ನದ ಸಾಲ ಅಥವಾ ವೈಯಕ್ತಿಕ ಸಾಲಗಳನ್ನು ಆಯ್ದು ಕೊಳ್ಳಲು ಬಯಸುತ್ತಾರೆ. ಈ ಎರಡೂ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿವೆ. ನಿರ್ದಿಷ್ಟ ಅಗತ್ಯಗಳು ಮತ್ತು ಕಾರ್ಯಸಾಧ್ಯತೆಗಳನ್ನು ಅವಲಂಬಿಸಿ ಸಾಲವನ್ನು ಆಯ್ಕೆ ಮಾಡಿಕೊಳ್ಳಬೇಕು. ಚಿನ್ನದ ಸಾಲಗಳ ವೈಯಕ್ತಿಕ ಸಾಲಗಳಿಗಿಂತ ಸಾಲಗಾರರಿಗೆ ಸ್ವಲ್ಪ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.

ಚಿನ್ನದ ಸಾಲ ಎಂದರೇನು?

ಚಿನ್ನದ ಸಾಲವು ಸುರಕ್ಷಿತ ಸಾಲವಾಗಿದ್ದು, ಇದರಲ್ಲಿ ಗ್ರಾಹಕನು ತನ್ನ ಚಿನ್ನದ ಆಭರಣಗಳನ್ನು ಬ್ಯಾಂಕ್ ಅಥವಾ ಚಿನ್ನದ ಹಣಕಾಸು ಕಂಪನಿಯೊಂದಿಗೆ ಮೇಲಾಧಾರವಾಗಿ ಇಡುತ್ತಾನೆ. ಚಿನ್ನದ ಶುದ್ಧತೆ ಮತ್ತು ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಕಂಪನಿಯು ಸಾಲದ ಮೊತ್ತ ನೀಡುತ್ತದೆ. ಸಾಲದ ಮೊತ್ತವು ಸಾಮಾನ್ಯವಾಗಿ ಮೌಲ್ಯಮಾಪನ ಮಾಡಿದ ಚಿನ್ನದ ಮೌಲ್ಯದ 60-75 ಪ್ರತಿಶತದಷ್ಟು ಇರುತ್ತದೆ. ಆದ್ದರಿಂದ ಚಿನ್ನದ ಬೆಲೆಯಲ್ಲಿ ಇತ್ತೀಚಿನ ಏರಿಳಿತ, ವ್ಯಕ್ತಿಗಳು ತಾವು ಮೊದಲು ನಡೆಸಿದ ಅದೇ ಪ್ರಮಾಣದ ಚಿನ್ನಕ್ಕಾಗಿ ಹೆಚ್ಚಿನ ಹಣ ಸಂಗ್ರಹಿಸಲು ನೆರವಾಗಲಿದೆ.

ಚಿನ್ನದ ವಿರುದ್ಧ ಸಾಲದ ಮೇಲೆ ಬ್ಯಾಂಕ್​ಗಳು ಬಡ್ಡಿ ದರವನ್ನು ಶೇ 7.5ರಷ್ಟರಿಂದ 25 ಪ್ರತಿಶತದಷ್ಟು ವಿಧಿಸುತ್ತವೆ. ಮರುಪಾವತಿ ಆಯ್ಕೆಗಳು ಸಾಕಷ್ಟು ಅನುಕೂಲಕರ ಆಗಿರುತ್ತವೆ. ಇಎಂಐ ಅಥವಾ ಜನಪ್ರಿಯವಾದವುಗಳಲ್ಲಿ ಒನ್​ ಟೈಮ್​ ಬುಲೆಟ್ ಮರುಪಾವತಿ ಅವಕಾಶ ನೀಡುತ್ತವೆ.

ಇದು ಬ್ಯಾಂಕಿಗೆ ಸುರಕ್ಷಿತ ಸಾಲ ಆಗಿರುವುದರಿಂದ ಸಾಲಗಾರನು ಸಾಲ ಮರುಪಾವತಿಸಲು ವಿಫಲವಾದರೆ ಹಣವನ್ನು ಮರುಪಡೆಯಲು ಸಾಲಗಾರನು ಆಧಾರವಾಗಿಟ್ಟ ಆಸ್ತಿ ದಿವಾಳಿ ಆಗಿಸಬಹುದು. ವಿತರಣಾ ಪ್ರಕ್ರಿಯೆಯು ತ್ವರಿತ ಮತ್ತು ಸುಲಭವಾಗಿರುತ್ತದೆ. ಹಣಕಾಸು ಸಂಸ್ಥೆಗಳು ಸಾಲಗಾರನ ಕ್ರೆಡಿಟ್ ಇತಿಹಾಸವನ್ನು ಕೇಳುವುದಿಲ್ಲ.

ವೈಯಕ್ತಿಕ ಸಾಲ ಎಂದರೇನು?

ವೈಯಕ್ತಿಕ ಸಾಲವು ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಕಂಪನಿಯಿಂದ (ಎನ್‌ಬಿಎಫ್‌ಸಿ) ವ್ಯಕ್ತಿಗಳು ತೆಗೆದುಕೊಳ್ಳುವ ಅಸುರಕ್ಷಿತ ಸಾಲವಾಗಿದೆ. ಒಬ್ಬರು ಎರವಲು ಪಡೆಯಬಹುದಾದ ಮೊತ್ತವು ಅವನ / ಅವಳ ಆದಾಯದ ಮಟ್ಟ, ಸಾಲದ ಇತಿಹಾಸ, ಉದ್ಯೋಗದ ಸ್ಥಿತಿ ಮತ್ತು ಹಿಂದಿನ ಸಾಲಗಳನ್ನು ಅವಲಂಬಿಸಿರುತ್ತದೆ.

ವೈಯಕ್ತಿಕ ಸಾಲಗಳು 1-3 ವರ್ಷಗಳ ದೀರ್ಘಾವಧಿಯೊಂದಿಗೆ ಬರುತ್ತವೆ. ವಿವಿಧ ಬಡ್ಡಿದರಗಳು ಸುಮಾರು 10 ಪ್ರತಿಶತದಿಂದ ಪ್ರಾರಂಭವಾಗುತ್ತವೆ. ಆದರೆ, ಸಾಲಗಾರರನ್ನು ಖಾತರಿದಾರರು ವ್ಯವಸ್ಥೆ ಮಾಡುವಂತೆ ಕೇಳಬಹುದು. ಸಾಲಗಾರನ ಪ್ರೊಫೈಲ್ ಖಚಿತಕ್ಕೆ ಸಾಕಷ್ಟು ದಾಖಲೆಗಳನ್ನು ಕೇಳುತ್ತದೆ. ಇದು ಚಿನ್ನದ ಸಾಲಕ್ಕಿಂತ ವಿತರಣಾ ಪ್ರಕ್ರಿಯೆಯನ್ನು ಹೆಚ್ಚು ದೀರ್ಘವಾಗಿರುತ್ತದೆ. ಈ ಸಾಲಗಳ ಮರುಪಾವತಿ ಹೆಚ್ಚಾಗಿ ಇಎಂಐಗಳ ರೂಪದಲ್ಲಿರುತ್ತದೆ.

ಎರಡರಲ್ಲಿ ಯಾವುದು ಉತ್ತಮ?

ತ್ವರಿತವಲ್ಲದ ಚಿನ್ನದ ಸಾಲ ಕಾರ್ಯಗತ ಅಗ್ಗವಾಗಿರುತ್ತವೆ. ವೈಯಕ್ತಿಕ ಸಾಲಕ್ಕೆ ಪಾವತಿಸಿದ 2-3 ಪ್ರತಿಶತದಷ್ಟು ಶುಲ್ಕದೊಂದಿಗೆ ಹೋಲಿಸಿದರೆ, ಸಂಸ್ಕರಣಾ ಶುಲ್ಕ ಮಂಜೂರಾದ ಮೊತ್ತದ ಶೇ 1ರಷ್ಟು ಇರುತ್ತದೆ. ಚಿನ್ನದ ಸಾಲವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಪೂರ್ವಪಾವತಿ ಮಾಡಲು ಬಯಸಿದರೆ, ಚಿನ್ನದ ಹಣಕಾಸು ಕಂಪನಿಗಳು ಯಾವುದೇ ಪೂರ್ವಪಾವತಿ ದಂಡವಿಲ್ಲದೆ ಆ ಆಯ್ಕೆ ನೀಡುತ್ತವೆ. ಆದರೆ ಇತರ ಕೆಲವು ಬ್ಯಾಂಕ್​ಗಳು ಶೇ 1ರಷ್ಟು ಶುಲ್ಕ ವಿಧಿಸುತ್ತವೆ. ವೈಯಕ್ತಿಕ ಸಾಲಗಳಿಗೆ ಪೂರ್ವಪಾವತಿ ಶುಲ್ಕ ಮಂಜೂರಾದ ಮೊತ್ತದ ಶೇ 2-3ರಷ್ಟಿದೆ.

ಚಿನ್ನದ ಸಾಲದ ಸ್ಪಷ್ಟವಾದ ಅನಾನುಕೂಲವೆಂದರೆ, ವೈಯಕ್ತಿಕ ಸಾಲಕ್ಕಿಂತ ಭಿನ್ನ ಸಾಲ ಪಡೆಯಲು ಭೌತಿಕ ಚಿನ್ನ ಹೊಂದುವ ಅವಶ್ಯಕತೆಯಿದೆ. ಅಲ್ಲಿ ಯಾವುದೇ ಮೇಲಾಧಾರ ಪ್ರತಿಜ್ಞೆ ಮಾಡುವ ಅಗತ್ಯವಿಲ್ಲ. ಸಾಲದ ಮೊತ್ತವನ್ನು ಸಹ ಸೀಮಿತಗೊಳಿಸಬಹುದು. ಇದು ಚಿನ್ನದ ಮೌಲ್ಯವನ್ನು ಅವಲಂಬಿಸಿರುತ್ತದೆ. ಅಲ್ಲದೆ, ಹಣಕಾಸಿನ ಹಿನ್ನಡೆಯ ಸಂದರ್ಭದಲ್ಲಿ ವ್ಯಕ್ತಿಯು ಚಿನ್ನದ ಸಾಲ ಡಿಫಾಲ್ಟ್​ ಮಾಡಿದರೆ, ಅಸ್ತಿತ್ವದಲ್ಲಿ ಇರುವ ಸಂಪತ್ತನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ, ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲವನ್ನು ವಿವೇಕದಿಂದ ಆರಿಸಿಕೊಳ್ಳಬೇಕು.

ABOUT THE AUTHOR

...view details