ನವದೆಹಲಿ: ಭಾರತದ ಚಿನಿವಾರ ಪೇಟೆಯ ವಹಿವಾಟಿನಲ್ಲಿ ಚಿನ್ನದ ಬೆಲೆ 479 ರೂಪಾಯಿಗಳ ಏರಿಕೆ ಕಂಡು 10 ಗ್ರಾಂಗೆ 47,860 ರೂಪಾಯಿ ತಲುಪಿದೆ.
'ಚಿನ್ನ' ಎನ್ನಲಷ್ಟೇ ಚೆನ್ನ... 10 ಗ್ರಾಂಗೆ 50 ಸಾವಿರ ಗಡಿ ತಲುಪಿದ ಬಂಗಾರ!
ಸೋಮವಾರ ಚಿನ್ನದ ಬೆಲೆಯಲ್ಲಿ 479 ರೂಪಾಯಿಗಳ ಏರಿಕೆ ಕಂಡು 10 ಗ್ರಾಂಗೆ 47,860 ರೂಪಾಯಿ ತಲುಪಿದೆ.
50 ಸಾವಿರ ಗಡಿ ತಲುಪಿದ ಬಂಗಾರ
ಕೆಲವು ಸ್ಪಾಟ್ ಮಾರುಕಟ್ಟೆಯಲ್ಲಿನ ವರದಿಗಳ ಪ್ರಕಾರ ಇದು 10 ಗ್ರಾಂಗೆ 50,000 ರೂಪಾಯಿ ವರೆಗೂ ವಹಿವಾಟು ನಡೆದಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ, ಕೊರೊನಾ ಹಾವಳಿ, ಷೇರುಪೇಟೆಗಳಲ್ಲಿ ಅಲ್ಲೋಲ ಕಲ್ಲೋಲ, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಬಂಗಾರದ ಬೆಲೆ ಗಗನಕ್ಕೆ ಏರುತ್ತಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
-