ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ 117 ರೂಪಾಯಿ ಹೆಚ್ಚಳವಾಗಿದ್ದು, ಈ ಮೂಲಕ 10 ಗ್ರಾಮ್ಗೆ 48,332 ರೂಪಾಯಿಗೆ ತಲುಪಿದೆ ಎಂದು ಹೆಚ್ಡಿಎಫ್ಸಿ ಸೆಕ್ಯೂರಿಟೀಸ್ ಮಾಹಿತಿ ನೀಡಿದೆ.
ಈ ಮೂಲಕ ಅಂತಾರಾಷ್ಟ್ರೀಯ ಬೆಲೆಗಳಲ್ಲಾದ ಬದಲಾವಣೆ ಹಾಗೂ ರೂಪಾಯಿ ಬೆಲೆ ಚೇತರಿಕೆ ಕಂಡಿದೆ. ಇದಕ್ಕೂ ಮೊದಲು ಚಿನ್ನದ ಬೆಲೆ 10 ಗ್ರಾಮ್ಗೆ 48,215 ರೂಪಾಯಿ ಇತ್ತು. ಈಗ 10 ಗ್ರಾಮ್ಗೆ 48,332 ರೂಪಾಯಿಗೆ ತಲುಪಿದೆ
ಇದನ್ನೂ ಓದಿ:6 ತಿಂಗಳೊಳಗೆ ಇ -ಕಾಮರ್ಸ್ ಆ್ಯಪ್ ಜಿಯೋಮಾರ್ಟ್, ವಾಟ್ಸ್ಆ್ಯಪ್ನಲ್ಲಿ ಎಂಬೆಡ್ ಮಾಡಲು ಅಂಬಾನಿ ಪ್ಲಾನ್!
ಚಿನ್ನದ ಬೆಲೆ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲಿಯೂ ಏರಿಕೆ ಕಂಡಿದೆ. ಒಂದು ಕೆ.ಜಿಗೆ 541 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಒಂದು ಕೆ.ಜಿಗೆ 64,116 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಈಗ 64,657 ರೂಪಾಯಿಗೆ ತಲುಪಿದೆ.
ರೂಪಾಯಿ ಬೆಲೆಯೂ ಕೂಡಾ ಡಾಲರ್ ವಿರುದ್ಧ 21 ಪೈಸೆ ಏರಿಕೆ ಕಂಡಿದ್ದು, ಈಗ ಒಂದು ಡಾಲರ್ಗೆ 73.28 ರೂಪಾಯಿ ಬೆಲೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನಕ್ಕೆ 1,834 ಅಮೆರಿಕನ್ ಡಾಲರ್ ಮತ್ತು ಒಂದು ಔನ್ಸ್ ಬೆಳ್ಳಿಗೆ 25 ಅಮೆರಿಕನ್ ಡಾಲರ್ಗಳಷ್ಟಿದೆ.