ಕರ್ನಾಟಕ

karnataka

ETV Bharat / business

ಕಸ್ಟಮ್ಸ್​ ಸುಂಕ ಇಳಿಕೆ.. ಕಡಿಮೆಯಾಗಲಿದೆ ಚಿನ್ನದ ಕಳ್ಳಸಾಗಣೆ - ಚಿನ್ನ ಜಿಎಸ್​ಟಿ

ಕೋವಿಡ್-19ನಿಂದ ಸರಕು ಸಾಗಣೆಗೆ ಅಡ್ಡಿಯುಂಟಾದ ಕಾರಣ ಚಿನ್ನವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವ ಪ್ರಮಾಣ 2020ರ ವೇಳೆಗೆ ಶೇ 80ರಷ್ಟು ಇಳಿಕೆಯಾಗಿ 20-25 ಟನ್‌ಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

Gold customs
Gold customs

By

Published : Feb 25, 2021, 8:45 PM IST

ಮುಂಬೈ: 2021-22ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕ ಶೇ 7.5ರಷ್ಟು ಇಳಿಕೆ ಮಾಡಿದ್ದರಿಂದ ಚಿನ್ನದ ಕಳ್ಳಸಾಗಣೆ ಕಡಿಮೆಯಾಗಲಿದೆ ಎಂದು ವಿಶ್ವ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ಹೇಳಿದೆ. ಹೆಚ್ಚುತ್ತಿರುವ ಹಣದ ಬೇಡಿಕೆಯ ಹಿನ್ನೆಲೆಯಲ್ಲಿ ಆಮದು ಹೆಚ್ಚಾಗುವ ಸಾಧ್ಯತೆಯಿದೆ. ಭಾರತೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಬಜೆಟ್‌ನ ಪ್ರಭಾವದ ಕುರಿತು ಡಬ್ಲ್ಯುಜಿಸಿ ವರದಿ ನೀಡಿದೆ.

ಕೋವಿಡ್-19ನಿಂದ ಸರಕು ಸಾಗಣೆಗೆ ಅಡ್ಡಿಯುಂಟಾದ ಕಾರಣ ಚಿನ್ನವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವ ಪ್ರಮಾಣ 2020ರ ವೇಳೆಗೆ ಶೇ 80ರಷ್ಟು ಇಳಿಕೆಯಾಗಿ 20-25 ಟನ್‌ಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಬಂಗಾರ-ಬೆಳ್ಳಿ ದರದಲ್ಲಿ ಏರಿಳಿತ: ಫೆ.25ರ ಗೋಲ್ಡ್​ ರೇಟ್ ಇಲ್ಲಿದೆ

ವಿಮಾನ ಸಂಚಾರ ಮತ್ತು ಕಸ್ಟಮ್ಸ್ ಕಡಿತದ ನಿರ್ಬಂಧದಿಂದಾಗಿ 2021ರಲ್ಲಿ ಇದೇ ಪ್ರವೃತ್ತಿ ಮುಂದುವರೆಯುತ್ತದೆ. ಬಜೆಟ್‌ಗೆ ಮುಂಚಿತವಾಗಿ ನಗದು ಮೇಲಿನ ತೆರಿಗೆಗಳು ಶೇ 16.26ರಷ್ಟಿತ್ತು. ಹೊಸ ತೆರಿಗೆ ನಿಯಮದಿಂದಾಗಿ ಅವುಗಳನ್ನು ಶೇ 2.19ರಷ್ಟು ಇಳಿಸಿ 14.07ರಲ್ಲಿ ಇರಿಸಲಾಗಿದೆ.

ABOUT THE AUTHOR

...view details