ಕರ್ನಾಟಕ

karnataka

ETV Bharat / business

ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಶಾಕ್​: ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ - ಭಾರತದಲ್ಲಿ ಬಂಗಾರ

ಚಿನ್ನಾಭರಣದ ಬೆಲೆಯಲ್ಲಿ ಇಂದು ಮಹತ್ವದ ಏರಿಕೆ ಕಂಡು ಬಂದಿದ್ದು, ಇದರಿಂದ ಆಭರಣ ಪ್ರಿಯರು ಶಾಕ್​ಗೊಳಗಾಗಿದ್ದಾರೆ.

Gold
Gold

By

Published : Oct 5, 2021, 4:43 PM IST

ನವದೆಹಲಿ:ಕಳೆದ ಕೆಲ ದಿನಗಳಿಂದ ಸತತವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಏರಿಕೆ ಕಂಡು ಬಂದಿದೆ. ಇದರಿಂದ ಆಭರಣ ಪ್ರಿಯರಿಗೆ ಶಾಕ್​ ನೀಡಿದೆ. ಮುಂದಿನ ಎರಡು ತಿಂಗಳು ದಸರಾ, ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳ ಆಚರಣೆ ಇದ್ದು, ಈ ನಡುವೆ ಚಿನ್ನಾಭರಣದ ಬೆಲೆಯಲ್ಲಿ ಏರಿಕೆ ಕಂಡು ಬಂದಿರುವುದು ಚಿನ್ನಾಭರಣ ಪ್ರಿಯರು ಆಘಾತಕ್ಕೊಳಗಾಗಿದ್ದಾರೆ.

10 ಗ್ರಾಂ ಚಿನ್ನದ ಬೆಲೆಯಲ್ಲಿ 269ರೂ ಏರಿಕೆ ಕಂಡು ಬಂದಿರುವ ಕಾರಣ ಇದೀಗ 45,766 ರೂ ಆಗಿದೆ. ಈ ಹಿಂದೆ ಇದರ ಬೆಲೆ 45,497 ಆಗಿತ್ತು. ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 630 ರೂ. ಏರಿಕೆಯಾಗಿದ್ದು, 59,704 ರೂ. ಆಗಿದೆ.

ಇದನ್ನೂ ಓದಿರಿ:ಫೈಜರ್​ ಲಸಿಕೆ ಕೋವಿಡ್​ ವಿರುದ್ಧ 6 ತಿಂಗಳು ಅತ್ಯಂತ ಪರಿಣಾಮಕಾರಿ: ಅಧ್ಯಯನ

ಡಾಲರ್​ ಎದುರು ಕುಸಿದ ರೂಪಾಯಿ

ಚಿನ್ನ - ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. 1 ಡಾಲರ್​ಗೆ 32 ಪೈಸೆ ಇಳಿಕೆಯಾಗಿದ್ದು, ಈ ಮೂಲಕ ಡಾಲರ್​ ಬೆಲೆ ಇದೀಗ 74.63 ರೂ. ಆಗಿದೆ.

ABOUT THE AUTHOR

...view details