ಪಣಜಿ :ಕೋವಿಡ್-19 ಪ್ರಕರಣಗಳು ಏರಿಕೆಯ ಆಗುತ್ತಿರುವುದರಿಂದ ಗೋವಾ ಸರ್ಕಾರ ಆ್ಯಕ್ಸಿಜನ್ ಸಿಲಿಂಡರ್ ರಫ್ತು ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿತು. ಉದ್ಯಮಕ್ಕೆ ಅಗತ್ಯವಾಗಿ ಬೇಕಾದ ಜೀವ ರಕ್ಷಕ ಆ್ಯಕ್ಸಿಜನ್ ದಾಸ್ತಾನು ಆರೋಗ್ಯ ಸೇವೆಗಳಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಕಂಪನಿಗಳಿಗೆ ಆದೇಶಿಸಿದೆ.
ಕೈಗಾರಿಕೆಗಳ ಖಾತೆ ಹೊಂದಿರುವ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಈ ಆದೇಶ ಹೊರಡಿಸಿದ್ದು, ಗೋವಾದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ದೃಷ್ಟಿಯಿಂದ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ತಕ್ಷಣದ ಪರಿಣಾಮದಿಂದ ಆಮ್ಲಜನಕ ಸಿಲಿಂಡರ್‌ಗಳ ರಫ್ತು ನಿಷೇಧಿಸಲಾಗಿದೆ ಎಂದು ಹೇಳಿದರು.