ಮುಂಬೈ: 2023ರ ಹಣಕಾಸು ವರ್ಷದಲ್ಲಿ ರಾಜ್ಯಗಳ ಹಣಕಾಸು ಕೊರತೆ ಜಿಡಿಪಿಯ ಶೇಕಡಾ 3.6ರಷ್ಟು ಇರುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ (ಇಂಡ್-ರಾ) ಏಜೆನ್ಸಿ ಅಂದಾಜು ಮಾಡಿದೆ. 2022ರ ಹಣಕಾಸು ವರ್ಷದ ಪರಿಷ್ಕೃತ ಅಂಕಿ- ಅಂಶಗಳಿಗಿಂತ ಸ್ವಲ್ಪ ಹೆಚ್ಚಿಗೆ ಇರುತ್ತದೆ ಎಂದು ಹೇಳಿದ್ದು, ಈ ಮೊದಲು 2022ರ ಹಣಕಾಸು ವರ್ಷದಲ್ಲಿ ಹಣಕಾಸು ಕೊರತೆ ಶೇಕಡಾ 4.1ರಷ್ಟಿತ್ತು ಎಂದು ಇಂಡ್-ರಾ ಹೇಳಿತ್ತು.
ಆದಾಯ ಸ್ವೀಕೃತಿಗಳಲ್ಲಿ ನಿರೀಕ್ಷೆಗಿಂತ ಉತ್ತಮವಾದ ಬೆಳವಣಿಗೆಯಾಗಿದೆ. 2022 ಹಣಕಾಸು ವರ್ಷದಲ್ಲಿ ನಾಮಮಾತ್ರ ಜಿಡಿಪಿಯಲ್ಲಿ ಹೆಚ್ಚಿನ ಬೆಳವಣಿಗೆಯಾಗಿದ್ದು, ಇದೇ ಕಾರಣದಿಂದ ಜಿಡಿಪಿಯನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.
ಇದಲ್ಲದೇ, 2022ರ ಹಣಕಾಸು ವರ್ಷದಲ್ಲಿ ಭಾರತದ ನಾಮಮಾತ್ರ ಜಿಡಿಪಿ ಶೇಕಡಾ 17.6ರಷ್ಟು ಬೆಳವಣಿಗೆಯಾಗಲಿದೆ ಎಂದು ಇಂಡ್-ರಾ ಅಂದಾಜಿಸಿದೆ. ಕೋವಿಡ್ ಪ್ರಭಾವದಿಂದಾಗಿ ಹದಗೆಟ್ಟಿದ್ದ ಹಣಕಾಸು ಪರಿಸ್ಥಿತಿ 2022-2023ರ ಹಣಕಾಸು ವರ್ಷದಲ್ಲಿ ಸುಧಾರಣೆಗೊಳ್ಳುವ ಸಾಧ್ಯತೆಯಿದೆ.