ಕರ್ನಾಟಕ

karnataka

ETV Bharat / business

ಬೆಲೆ ಏರಿಕೆ ಭಾರಕ್ಕೆ ನೆಲಕಚ್ಚಿದ ತೈಲ ಬಳಕೆ: 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ! - ಫೆಬ್ರವರಿಯಲ್ಲಿ ಪೆಟ್ರೋಲ್ ಬಳಕೆ

ಫೆಬ್ರವರಿಯಲ್ಲಿ ತೈಲ ಬೇಡಿಕೆಯ ಇಂಧನ ಬಳಕೆ ಶೇ 4.9ರಷ್ಟು ಇಳಿದು 17.2 ದಶಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಸೆಲ್​ ಅಂಕಿ - ಅಂಶಗಳ ಮೂಲಕ ತಿಳಿಸಿದೆ. ಮಾಸಿಕ ಆಧಾರದ ಮೇಲೆ ಬೇಡಿಕೆಯು ಶೇ 4.6ರಷ್ಟು ಕುಸಿದಿದೆ.

Fuel
Fuel

By

Published : Mar 12, 2021, 2:19 PM IST

ಬೆಂಗಳೂರು: ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಬೇಡಿಕೆಯ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪರಿಣಾಮ ಚಿಲ್ಲರೆ ದರ ಏರಿಕೆ ಮುಂದುವರಿದಿದೆ. ಹೀಗಾಗಿ ಇಂಧನ ಬಳಕೆ ಫೆಬ್ರವರಿಯಲ್ಲಿ ಕುಸಿತ ಕಂಡಿದೆ. ಕಳೆದ ಸೆಪ್ಟೆಂಬರ್‌ನಿಂದ ಬೇಡಿಕೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಫೆಬ್ರವರಿಯಲ್ಲಿ ತೈಲ ಬೇಡಿಕೆಯ ಇಂಧನ ಬಳಕೆ ಶೇ 4.9ರಷ್ಟು ಇಳಿದು 17.2 ದಶಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಸೆಲ್​ ಅಂಕಿ ಅಂಶಗಳ ಮೂಲಕ ತಿಳಿಸಿದೆ. ಮಾಸಿಕ ಆಧಾರದ ಮೇಲೆ ಬೇಡಿಕೆಯು ಶೇ 4.6ರಷ್ಟು ಕುಸಿದಿದೆ.

ನೈಜ ಚೇತರಿಕೆ ಕಾಣುವ ಮೊದಲು ಬೆಲೆಗಳು ಕಡಿಮೆಯಾಗಬೇಕು ಅಥವಾ ಕೊರೊನಾ ವೈರಸ್ ಪ್ರಕರಣಗಳು ಕ್ಷೀಣಿಸಬೇಕು. ಏಕೆಂದರೆ ಕೆಲವರು ಈಗಲೂ ಪ್ರಯಾಣಿಸಲು ಹಿಂಜರಿಯುತ್ತಾರೆ ಎಂದು ರಿಫಿನಿಟಿವ್ ವಿಶ್ಲೇಷಕ ಎಹ್ಸಾನ್ ಉಲ್ ಹಕ್ ಹೇಳಿದ್ದಾರೆ.

ಇದನ್ನೂ ಓದಿ: 'ಕ್ವಾಡ್​' ಒಕ್ಕೂಟದಿಂದ ಇಂಡೋ - ಪೆಸಿಫಿಕ್​​ ವಲಯದಲ್ಲಿ ವೇಗದ ಕೊರೊನಾ ಲಸಿಕೆ ವಿತರಣೆ: ಕ್ವಾಡ್ ಶೃಂಗ

ಭಾರತವು ಕಳೆದ ಐದು ತಿಂಗಳಲ್ಲಿ ಮೊದಲ ಬಾರಿಗೆ ಅತ್ಯಂತ ಹೆಚ್ಚಿನ ಕುಸಿತ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಗಳ ನಡೆಯಿಂದಾಗಿ ಭಾರತದಲ್ಲಿ ಗ್ಯಾಸೋಲಿನ್ ಮತ್ತು ಗ್ಯಾಸೋಯಿಲ್ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಈ ತಿಂಗಳ ಆರಂಭದಲ್ಲಿ ತೈಲ ಉತ್ಪಾದನಾ ಕಡಿತ ವಿಸ್ತರಿಸುವ ಪ್ರಮುಖ ತೈಲ ಉತ್ಪಾದಕರ ನಿರ್ಧಾರವು ಕೆಲವು ದೇಶಗಳಲ್ಲಿ ಬಳಕೆ ಚೇತರಿಕೆಗೆ ಕಾರಣವಾಗಬಹುದು.

ಸಾಂಕ್ರಾಮಿಕ ಪರಿಣಾಮ ಕಡಿಮೆ ಮಾಡಲು ಭಾರತವು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಮಾಡುತ್ತಿದೆ. ಆದರೆ, ಬೆಲೆಗಳನ್ನು ಸ್ಥಿರಗೊಳಿಸಲು ಒಪೆಕ್‌ನಿಂದ ಇನ್ನೂ ಕೆಲವು ಸಹಾಯದ ಅಗತ್ಯವಿದೆ. ಒಪೆಕ್ ಚಿನ್ನದ ಮೊಟ್ಟೆ ಇಡುವ ಕೋಳಿ, ಅದು ಕೊಲ್ಲುವ ಹಾವು ಆಗಬಾರದು ಎಂದು ಉಲ್ ಹಕ್ ಅಭಿಪ್ರಾಯಪಟ್ಟರು.

ಭಾರತದಲ್ಲಿ ಡೀಸೆಲ್ ಬಳಕೆ ಮತ್ತು ಒಟ್ಟಾರೆ ಸಂಸ್ಕರಿಸಿದ ಇಂಧನ ಮಾರಾಟದಲ್ಲಿ ಸುಮಾರು ಶೇ 40ರಷ್ಟಿದೆ. ಇದು ಹಿಂದಿನ ತಿಂಗಳಿಗಿಂತ ಶೇ 3.8ರಷ್ಟು ಕುಸಿದು 6.55 ದಶಲಕ್ಷ ಟನ್‌ಗಳಿಗೆ ತಲುಪಿದೆ. ವರ್ಷದಿಂದ ವರ್ಷಕ್ಕೆ ಶೇ 8.5ರಷ್ಟು ಕುಸಿದಿದೆ. ಗ್ಯಾಸೋಲಿನ್ ಅಥವಾ ಪೆಟ್ರೋಲ್ ಮಾರಾಟವು ಫೆಬ್ರವರಿಯಲ್ಲಿ ಶೇ 6.5ರಷ್ಟು ಇಳಿದು 2.44 ಮಿಲಿಯನ್ ಟನ್​ಳಿಗೆ ತಲುಪಿದೆ. ಹಿಂದಿನ ವರ್ಷಕ್ಕಿಂತ ಶೇ 3ರಷ್ಟು ಕಡಿಮೆಯಾಗಿದೆ.

ಅಡುಗೆ ಅನಿಲ ಮಾರಾಟವು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 2.6 ದಶಲಕ್ಷ ಟನ್‌ಗಳಿಗಿಂತ ಶೇ 7.6ರಷ್ಟು ಹೆಚ್ಚಾಗಿದೆ. ನಾಫ್ತಾ ಮಾರಾಟವು 1.22 ದಶಲಕ್ಷ ಟನ್‌ಗಳಷ್ಟು ಬದಲಾಗದೆ ಉಳಿದಿದೆ. ರಸ್ತೆ ನಿರ್ಮಾಣದಲ್ಲಿ ಬಳಸುವ ಬಿಟುಮೆನ್ ಮಾರಾಟವು ಸುಮಾರು ಶೇ 11.1ರಷ್ಟು ಕಡಿಮೆಯಾಗಿದ್ದು, ಇಂಧನ ತೈಲವು ಕಳೆದ ತಿಂಗಳು ಸುಮಾರು ಶೇ 10ರಷ್ಟು ತಗ್ಗಿದೆ.

ABOUT THE AUTHOR

...view details