ನವದೆಹಲಿ :ಭಾರತದ ವಿದೇಶಿ ವ್ಯಾಪಾರ ನೀತಿ (ಎಫ್‌ಟಿಪಿ) 2015-20 ಸಾಲಿನದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. 2021ರ ಮಾರ್ಚ್ 31ರವರೆಗೆ ವಿದೇಶಿ ವ್ಯಾಪಾರ ನೀತಿ ಅನ್ವಯವಾಗುತ್ತಿತ್ತು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ಈ ಪ್ರಕಟಣೆ ಹೊರಡಿಸಿದೆ. 2021ರ ಮಾರ್ಚ್ 31ರವರೆಗೆ ಮಾನ್ಯವಾಗಿರುವ ಅಸ್ತಿತ್ವದಲ್ಲಿರುವ ವಿದೇಶಿ ವ್ಯಾಪಾರ ನೀತಿ 2015-2020 ಅನ್ನು 2021ರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದಿದೆ.