ಕರ್ನಾಟಕ

karnataka

ETV Bharat / business

ಡಿ.1ರಿಂದ RTGS ಮನಿ ಟ್ರಾನ್ಸ್​ಫರ್​, LPG ದರ, PNB ಎಟಿಎಂ ವಿತ್​ಡ್ರಾ ಸೇರಿ ಏನೆಲ್ಲ ಬದಲಾವಣೆ? ಇಲ್ಲಿದೆ ವಿವರ

2020ರ ಡಿಸೆಂಬರ್​ 1ರಿಂದ ಆರ್‌ಟಿಜಿಎಸ್ ಸಮಯ ಬದಲು, ಎಲ್‌ಪಿಜಿ ಬೆಲೆಗಳಲ್ಲಿನ ಬದಲಾವಣೆಯಿಂದ ಹಿಡಿದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗ್ರಾಹಕರಿಗೆ ಪರಿಷ್ಕೃತ ಎಟಿಎಂ ನಗದು ಹಿಂತೆಗೆದುಕೊಳ್ಳುವ ನಿಯಮಗಳವರಿಗಿನ ಎಲ್ಲ ಬದಲಾವಣೆಗಳ ವಿವರವಾದ ನೋಟ ಇಲ್ಲಿದೆ:

Money
ಮನಿ

By

Published : Nov 30, 2020, 9:33 PM IST

ನವದೆಹಲಿ: 2020ರ ಡಿಸೆಂಬರ್​ 1ರಿಂದ ಸಾಮಾನ್ಯ ಜನರ ಆರ್ಥಿಕ ನಿರ್ವಹಣೆಗಳ ಮೇಲೆ ನೇರ ಪರಿಣಾಮ ಬೀರುವಂತಹ ಹಲವು ಬದಲಾವಣೆಗಳು ಜಾರಿಗೆ ಬರಲಿವೆ.

ಆರ್‌ಟಿಜಿಎಸ್ ಸಮಯ ಮತ್ತು ಎಲ್‌ಪಿಜಿ ಬೆಲೆಗಳಲ್ಲಿನ ಬದಲಾವಣೆಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗ್ರಾಹಕರಿಗೆ ಪರಿಷ್ಕೃತ ಎಟಿಎಂ ನಗದು ಹಿಂತೆಗೆದುಕೊಳ್ಳುವ ನಿಯಮಗಳವರಿಗಿನ ಎಲ್ಲ ಬದಲಾವಣೆಗಳ ವಿವರವಾದ ನೋಟ ಇಲ್ಲಿದೆ:

ಆರ್​ಟಿಜಿಎಸ್​ ಸಮಯ ಬದಲು

ಡಿಸೆಂಬರ್‌ ನರಿಂದ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ಪಾವತಿ ವ್ಯವಸ್ಥೆಯು ವಾರದ ಎಲ್ಲ ದಿನವೂ ಕಾರ್ಯಗತವಾಗಲಿದೆ.

ಪ್ರಸ್ತುತ, ಗ್ರಾಹಕರ ಆರ್‌ಟಿಜಿಎಸ್ ಸೇವೆಯನ್ನು ಬ್ಯಾಂಕ್​ಗಳ ಕೆಲಸದ ದಿನದಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮಾತ್ರ ಮಾಡಬಹುದಾಗಿದೆ. ಬ್ಯಾಂಕ್​ಗಳು ಅನುಸರಿಸುವ ಸಮಯಗಳ ಅನುಗುಣವಾಗಿ ಬ್ಯಾಂಕ್​ನಿಂದ ಬ್ಯಾಂಕ್‌ಗೆ ಬದಲಾಗಬಹುದು. 2019ರ ಡಿಸೆಂಬರ್‌ನಲ್ಲಿ ಆರ್‌ಬಿಐ ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (ಎನ್‌ಇಎಫ್‌ಟಿ) ವ್ಯವಸ್ಥೆಯನ್ನು 24x7x365 ಆಧಾರದ ಮೇಲೆ ಲಭ್ಯವಾಗುವಂತೆ ಜಾರಿಗೊಳಿಸಿತು.

ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಪರಸ್ಪರ ಭಿನ್ನವಾಗಿವೆ. 2 ಲಕ್ಷ ರೂ.ವರೆಗಿನ ಹಣ ವರ್ಗಾವಣೆಗೆ ಎನ್ಇಎಫ್​​ಟಿ, 2 ಲಕ್ಷ ರೂ.ಗಿಂತ ಹೆಚ್ಚಿನ ವರ್ಗಾವಣೆಗೆ ಆರ್​ಟಿಜಿಎಸ್ ಬಳಸುತ್ತಿದ್ದಾರೆ.

ಎಲ್​ಪಿಜಿ ಬೆಲೆ ಬದಲಾಗಬಹುದು

ಇಲ್ಲಿಯವರೆಗೆ ಯಾವುದೇ ಘೋಷಣೆ ಮಾಡಲ್ಲ ಆದರೂ ಅಡುಗೆ ಅನಿಲದ ಸಿಲಿಂಡರ್ ಬೆಲೆಗಳು 2020ರ ಡಿಸೆಂಬರ್ 1ರಿಂದ ಪರಿಷ್ಕರಿಸುವ ಸಾಧ್ಯತೆಯಿದೆ. ಭಾರತದಲ್ಲಿ ಎಲ್​​ಪಿಜಿ ಬೆಲೆಗಳನ್ನು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ನಿರ್ಧರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ಆಧರಿಸಿ ಮಾಸಿಕ ಆಧಾರದ ಮೇಲೆ ಬೆಲೆ ಪರಿಷ್ಕರಿಸಲಾಗುತ್ತದೆ.

ಪಿಎನ್​ಬಿ ವಿತ್​ಡ್ರಾ

ಎಟಿಎಂಗಳಲ್ಲಿ ಅನಧಿಕೃತ ವಹಿವಾಟು ಕಡಿಮೆ ಮಾಡಲು, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ಎಟಿಎಂಗಳಲ್ಲಿ ಒಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯನ್ನು 2020ರ ಡಿಸೆಂಬರ್ 1ರಿಂದ ಪರಿಚಯಿಸುತ್ತಿದೆ.

ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ! ಪಿಎನ್‌ಬಿ 2.0 2020ರ ಡಿಸೆಂಬರ್ 1ರಿಂದ ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆಯನ್ನು ಪ್ರಾರಂಭಿಸುತ್ತಿದೆ. ಹಿಂಪಡೆಯುವಿಕೆಯನ್ನು ಸುಲಭಗೊಳಿಸುವುದು, ಬ್ಯಾಂಕಿಂಗ್ ಸುಲಭಗೊಳಿಸುವುದು ನಮ್ಮ ಉದ್ದೇಶ ಎಂದು ಟ್ವಿಟರ್​ನಲ್ಲಿ ಹೇಳಿದೆ.

ಗ್ರಾಹಕರು ಡಿಸೆಂಬರ್ 1ರ ಬಳಿಕ ರಾತ್ರಿ 8 ರಿಂದ ಬೆಳಗ್ಗೆ 8ರ ನಡುವೆ 10,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುತ್ತಿದ್ದರೆ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಫೋನ್‌ನಲ್ಲಿ ಕಳುಹಿಸಿದ ಒಟಿಪಿ ಸಲ್ಲಿಸಬೇಕಾಗುತ್ತದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. 10,000 ರೂ.ಗಿಂತ ಕಡಿಮೆ ಹಣ ಹಿಂಪಡೆಯಲು ಒಟಿಪಿಯ ಅಗತ್ಯವಿಲ್ಲ.

ABOUT THE AUTHOR

...view details