ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
68 ವಯಸ್ಸಿನ ವಾಣಿಜ್ಯ ಬ್ಯಾಂಕರ್ ಚಕ್ರವರ್ತಿ ಅವರು, ಕೇಂದ್ರ ಬ್ಯಾಂಕರ್ನಲ್ಲಿ ಸೇವೆ ಸಲ್ಲಿಸಿದ್ದು ಚೆಂಬೂರಿನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಬ್ಯಾಂಕಿಂಗ್ ಉದ್ಯಮದ ಮೂಲಗಳು ತಿಳಿಸಿವೆ.
ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಂತಹ ಸರ್ಕಾರಿ ಬ್ಯಾಂಕ್ಗಳಲ್ಲಿ ಕೆಲಸ ಮಾಡಿದ ನಂತರ 2009ರಲ್ಲಿ ಆರ್‌ಬಿಐಗೆ ಡಿಜಿ ಆಗಿ ಸೇರಿಕೊಂಡರು. ತಮ್ಮ ಅಧಿಕಾರಾವಧಿ ಮುಗಿಯುವ ಮೂರು ತಿಂಗಳ ಮೊದಲು 2014ರಲ್ಲಿ ರಾಜೀನಾಮೆ ಸಲ್ಲಿಸಿ ಹೊರಬಂದರು.
ಇದನ್ನೂ ಓದಿ: ಇದಪ್ಪಾ ಪ್ರಾಮಾಣಿಕತೆ.. ಗ್ರಾಹಕ ಗೆದ್ದ 6 ಕೋಟಿ ರೂ. ಲಾಟರಿ ಟಿಕೆಟ್ ಹಸ್ತಾಂತರ!
ಚಕ್ರವರ್ತಿ ಅವರು ವಾಣಿಜ್ಯ ಬ್ಯಾಂಕಿಂಗ್ ಪ್ರವೇಶಿಸುವ ಮೊದಲು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು. ಆರ್‌ಬಿಐನಲ್ಲಿ ಅವರು ಡಿಜಿ ಆಗಿ ಬ್ಯಾಂಕಿಂಗ್ ನಿಯಂತ್ರಣ ಮತ್ತು ಮೇಲ್ವಿಚಾರಣೆ ಸೇರಿದಂತೆ ವಿವಿಧ ಇಲಾಖೆಗಳನ್ನು ನಿರ್ವಹಿಸಿದರು.
ಹಣದುಬ್ಬರ ನಿಭಾಯಿಸುವ ನೀತಿಗಳ ಪರಿಣಾಮಕಾರಿತ್ವದ ಬಗ್ಗೆ ಆರ್‌ಬಿಐ ಅಧಿಕಾರಿಯೊಬ್ಬರು ಪ್ರಶ್ನಾರ್ಥಕ ಚಿಹ್ನೆಗಳನ್ನು ಹಾಕಿದ್ದಾರೆ ಎಂಬ ವರದಿಗಳ ನಂತರ, ಅವರನ್ನು ಆಗಿನ ಗವರ್ನರ್ ಡಿ ಸುಬ್ಬರಾವ್ ಅವರು ಅನೇಕ ಜವಾಬ್ದಾರಿಗಳಿಂದ ತೆಗೆದುಹಾಕಿದರು. ಕೆಲ ದಿನಗಳ ನಂತರ ಅವರ ಜವಾಬ್ದಾರಿಗಳನ್ನು ಮತ್ತೆ ನೀಡಲಾಯಿತು.
ತೀಕ್ಷ್ಣ ಬುದ್ಧಿ, ಹಾಸ್ಯ ಮತ್ತು ತ್ವರಿತ ನಿರ್ಧಾರಗಳಿಗೆ ಚಕ್ರವರ್ತಿ ಖ್ಯಾತಿ ಹೊಂದಿದ್ದರು. ಡೆಡ್ ಲೋನ್ (ಕಾರ್ಯನಿರತವಲ್ಲದ ಸಾಲ) ಹೆಚ್ಚಳವನ್ನು 'ವ್ಯವಸ್ಥೆ ರಚಿತ ಎನ್‌ಪಿಎ' ಎಂದು ದೂಷಿಸಿದ್ದಕ್ಕಾಗಿ ಅವರು ತಮ್ಮ ಮಾಜಿ ವಾಣಿಜ್ಯ ಬ್ಯಾಂಕಿಂಗ್ ಸಹೋದ್ಯೋಗಿಗಳನ್ನು ಆಗಾಗ್ಗೆ ಟೀಕಿಸುತ್ತಿದ್ದರು. ಹಣಕಾಸಿನ ಸೇರ್ಪಡೆ ಗುರಿಗಳನ್ನು ಒತ್ತಾಯಿಸಿದರು. ನಗದು ಮೀಸಲು ಅನುಪಾತದ (ಸಿಆರ್ಆರ್) ಮೇಲಿನ ಬಡ್ಡಿ ಬಗ್ಗೆ ಎಸ್‌ಬಿಐನ ಮಾಜಿ ಅಧ್ಯಕ್ಷ ಪ್ರತಿಪ್ ಚೌಧರಿ ಅವರೊಂದಿಗೆ ಸಾರ್ವಜನಿಕವಾಗಿ ವಾದಕ್ಕಿಳಿದಿದ್ದರು.
2018ರಲ್ಲಿ ಸಿಬಿಐ ತನಿಖೆ ನಡೆಸಿದ ಎರಡು ಪ್ರಕರಣಗಳಲ್ಲಿ ಅವರ ಹೆಸರು ಶಂಕಿತವಾಗಿ ಸೇರ್ಪಡೆಗೊಂಡಿತು. ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಬಂಧ, ಅವರ ವಿರುದ್ಧ ಲುಕ್ಔಟ್ ನೋಟಿಸ್ ಇರುವುದರಿಂದ ಲಂಡನ್‌ಗೆ ತೆರಳುವುದನ್ನು ತಡೆ ಹಿಡಿಯಲಾಯಿತು.