ಕರ್ನಾಟಕ

karnataka

ETV Bharat / business

ಇಂಗ್ಲೀಷ್ ಮರೆತು ಆಡುಭಾಷೆಯಲ್ಲಿ ವ್ಯವಹರಿಸಿ.. ಹಣಕಾಸು ಸಂಸ್ಥೆಗಳಿಗೆ ನೀತಿ ಆಯೋಗದ ಸಲಹೆ - fintech firms

ಇಂಗ್ಲೀಷ್‌ನ ಮರೆತು ಸ್ಥಳೀಯವಾಗಿ ಮುನ್ನಡೆಯಿರಿ. ಹಣಕಾಸು ವಲಯದ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಅಳವಡಿಸಿಕೊಳ್ಳದಿದ್ರೇ ಜನ ದೂರವಾಗುತ್ತಾರೆ. ಬ್ಯಾಂಕ್ ಖಾತೆಗಳನ್ನು ಹೊಂದಿರುವ ನಾಗರಿಕರ ಸಂಖ್ಯೆಯನ್ನು ಶೇ. 30ರಿಂದ 80 ಪ್ರತಿಶತಕ್ಕೆ ಹೆಚ್ಚಿಸುವ ಮೂಲಕ ಭಾರತವು 2011ರಿಂದ ಹಣಕಾಸು ಸೇರ್ಪಡೆಯಲ್ಲಿ ದೀರ್ಘ ಪ್ರಗತಿ ಸಾಧಿಸಿದೆ.

Amitabh Kant
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್

By

Published : Jun 12, 2020, 7:37 PM IST

ನವದೆಹಲಿ :ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಇಂಗ್ಲೀಷ್ ಭಾಷೆ ಮರೆತು ಸ್ಥಳೀಯವಾಗಿ ವ್ಯವಹರಿಸಿ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಹಣಕಾಸು ತಂತ್ರಜ್ಞಾನ (ಪಿನ್​ಟೆಕ್​) ಸಂಸ್ಥೆಗಳಿಗೆ ಸಲಹೆ ನೀಡಿದರು.

ವರ್ನಾಕ್ಯುಲರ್ ನಮ್ಮ ಮುಂದಿನ ಮಾರ್ಗವಾಗಿದೆ. ಹಣಕಾಸನ್ನು ಒಂದು ಸೂರಿನಡಿ ತರುವ ಪ್ರಯತ್ನಗಳ ಸ್ಥಳೀಕರಿಸುವ ಅಗತ್ಯವಿದೆ. ಇಂಗ್ಲೀಷ್‌ನಲ್ಲಿ ಮಾತ್ರ ಸೇವೆಗಳನ್ನು ತಲುಪಿಸುವ ಬದಲು ಭಾಷೆ ಹಾಗೂ ಅವುಗಳ ಉಪಭಾಷೆಗಳಿಗೂ ಅವಕಾಶ ನೀಡಬೇಕಾಗುತ್ತದೆ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ್ದ ವರ್ಚುವಲ್ ಶೃಂಗಸಭೆಯಲ್ಲಿ ಕಾಂತ್ ಹೇಳಿದರು.

ಇಂಗ್ಲೀಷ್‌ನ ಮರೆತು ಸ್ಥಳೀಯವಾಗಿ ಮುನ್ನಡೆಯಿರಿ. ಹಣಕಾಸು ವಲಯದ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಅಳವಡಿಸಿಕೊಳ್ಳದಿದ್ರೇ ಜನ ದೂರವಾಗುತ್ತಾರೆ. ಬ್ಯಾಂಕ್ ಖಾತೆಗಳನ್ನು ಹೊಂದಿರುವ ನಾಗರಿಕರ ಸಂಖ್ಯೆಯನ್ನು ಶೇ. 30ರಿಂದ 80 ಪ್ರತಿಶತಕ್ಕೆ ಹೆಚ್ಚಿಸುವ ಮೂಲಕ ಭಾರತವು 2011ರಿಂದ ಹಣಕಾಸು ಸೇರ್ಪಡೆಯಲ್ಲಿ ದೀರ್ಘ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ಕೋವಿಡ್​-19 ಸೋಂಕು ಬಳಿಕ ನೇರ ಲಾಭ ವರ್ಗಾವಣೆ ಯೋಜನೆಯ ಮೂಲಕ ಭಾರತವು ಉದ್ದೇಶಿತ ಯೋಜನೆಗಳಿಗೆ ಹಣವನ್ನು ಸಮರ್ಥವಾಗಿ ಕಳುಹಿಸಿದೆ. ಆದರೆ, ಅಮೆರಿಕದಂತಹ ದೇಶಗಳು ಈ ಕಾರ್ಯದಲ್ಲಿ ಹೆಣಗಾಡುತ್ತಿವೆ ಎಂದರು.

ABOUT THE AUTHOR

...view details