ಮುಂಬೈ:ಕೊರೊನಾ ವಿಪ್ಲವದಲ್ಲೂ ಸೆಪ್ಟೆಂಬರ್ 18ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹಕ್ಕೆ 3.378 (24, 896 ಕೋಟಿ ರೂ.) ಬಿಲಿಯನ್ ಡಾಲರ್ ಹರಿದುಬಂದು ಸಾರ್ವಕಾಲಿಕ ಗರಿಷ್ಠ 545.038 ಬಿಲಿಯನ್ ಡಾಲರ್‌ಗೆ (40.1 ಲಕ್ಷ ಕೋಟಿ ರೂ.) ತಲುಪಿದೆ.
ಸೆಪ್ಟೆಂಬರ್ 11ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ನಿಧಿ 353 ಮಿಲಿಯನ್ ಡಾಲರ್ ಇಳಿದು 541.660 ಬಿಲಿಯನ್ ಡಾಲರ್‌ಗೆ ಇಳಿದಿತ್ತು. ವಿದೇಶೀ ಕರೆನ್ಸಿ ಸ್ವತ್ತುಗಳ (ಎಫ್‌ಸಿಎ) ಹೆಚ್ಚಳದಿಂದಾಗಿ ವಿದೇಶಿ ವಿನಿಮಯ ನಿಧಿ ಏರಿಕೆಯಾಗಿದೆ. ಸಾಪ್ತಾಹಿಕ ವಾರದಿಯಲ್ಲಿ ಎಫ್‌ಸಿಎಗಳು 3.943 ಬಿಲಿಯನ್ ಡಾಲರ್‌ಗಳಿಂದ 501.464 ಬಿಲಿಯನ್ ಡಾಲರ್‌ಗೆ ಏರಿದೆ ಎಂದು ಕೇಂದ್ರ ಬ್ಯಾಂಕ್ ಅಂಕಿ ಅಂಶಗಳು ತಿಳಿಸಿವೆ.