ಕರ್ನಾಟಕ

karnataka

ETV Bharat / business

ಸಾರ್ವಕಾಲಿಕ ಗರಿಷ್ಠ ಏರಿಕೆ ಕಂಡ ವಿದೇಶಿ ವಿನಿಮಯ ವಾರದಲ್ಲಿ 290 ಮಿಲಿಯನ್​ ಡಾಲರ್​ ಕುಸಿತ! - ವಿದೇಶಿ ವಿನಿಮಯ ನಿಧಿ ಕುಸಿತ

ವರದಿಯಾದ ವಾರದಲ್ಲಿ ಮೀಸಲು ಕುಸಿತವು ಒಟ್ಟಾರೆ ನಿಧಿಯ ಪ್ರಮುಖ ಸ್ವತ್ತಾದ ವಿದೇಶಿ ಕರೆನ್ಸಿ ಸ್ವತ್ತು (ಎಫ್‌ಸಿಎ) ಕುಸಿತದಿಂದಾಗಿ ಸಂಭವಿಸಿದೆ. ಎಫ್‌ಸಿಎ 253 ಮಿಲಿಯನ್ ಡಾಲರ್‌ನಿಂದ 537.474 ಬಿಲಿಯನ್ ಡಾಲರ್‌ಗೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಾಪ್ತಾಹಿಕ ಅಂಕಿ ಅಂಶಗಳು ತಿಳಿಸಿವೆ.

Forex reserves
ವಿದೇಶಿ ವಿನಿಮಯ

By

Published : Jan 1, 2021, 8:00 PM IST

ಮುಂಬೈ: ಡಿಸೆಂಬರ್ 25ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 290 ಮಿಲಿಯನ್ ಡಾಲರ್ ಇಳಿದು 580.841 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಆರ್‌ಬಿಐ ಅಂಕಿ ಅಂಶಗಳು ತಿಳಿಸಿವೆ.

ಹಿಂದಿನ ವಾರದಿಂದ ಡಿಸೆಂಬರ್ 18ರವರೆಗೆ ಮೀಸಲು ನಿಧಿ 2.563 ಬಿಲಿಯನ್ ಡಾಲರ್​ಗಳಷ್ಟು ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ 581.131 ಬಿಲಿಯನ್ ಡಾಲರ್‌ಗೆ ತಲುಪಿತ್ತು.

ವರದಿಯಾದ ವಾರದಲ್ಲಿ ಮೀಸಲು ಕುಸಿತವು ಒಟ್ಟಾರೆ ನಿಧಿಯ ಪ್ರಮುಖ ಸ್ವತ್ತಾದ ವಿದೇಶಿ ಕರೆನ್ಸಿ ಸ್ವತ್ತು (ಎಫ್‌ಸಿಎ) ಕುಸಿತದಿಂದಾಗಿ ಸಂಭವಿಸಿದೆ. ಎಫ್‌ಸಿಎ 253 ಮಿಲಿಯನ್ ಡಾಲರ್‌ನಿಂದ 537.474 ಬಿಲಿಯನ್ ಡಾಲರ್‌ಗೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಾಪ್ತಾಹಿಕ ಅಂಕಿ ಅಂಶಗಳು ತಿಳಿಸಿವೆ.

ಓದಿ:ಒಂದೇ ಒಂದು ಮಿಸ್ಡ್​​​​ ಕಾಲ್ ಕೊಟ್ಟರೆ ನಿಮ್ಮ ಸಿಲಿಂಡರ್​ ಬುಕ್ಕಾಗುತ್ತೆ : ಯಾವುದು ಆ ನಂಬರ್​?​

ಡಾಲರ್ ಪರಿಭಾಷೆಯಲ್ಲಿ ಹೇಳುವುದಾದರೆ, ವಿದೇಶಿ ಕರೆನ್ಸಿ ಸ್ವತ್ತುಗಳು ಅಮೆರಿಕನ್​ ಡಾಲರ್ ಹೊರತುಪಡಿಸಿ ಯುನಿಟ್, ಪೌಂಡ್ ಮತ್ತು ಯೆನ್​ನಂತಹ ವಿದೇಶಿ ವಿನಿಮಯ ಮೀಸಲುಗಳಲ್ಲಿ ಸವಕಳಿ ಕಂಡುಬಂದಿದೆ.

ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 25ಕ್ಕೆ ಕೊನೆಗೊಂಡ ವಾರದಲ್ಲಿ ಚಿನ್ನದ ಸಂಗ್ರಹವು 308 ಮಿಲಿಯನ್ ಡಾಲರ್​ಗಳಷ್ಟು ಇಳಿದು 36.711 ಬಿಲಿಯನ್ ಡಾಲರ್​ಗಳಿಗೆ ತಲುಪಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) 4 ಮಿಲಿಯನ್ ಡಾಲರ್‌ನಿಂದ 1.510 ಬಿಲಿಯನ್ ಡಾಲರ್‌ಗೆ ಇಳಿದಿದೆ. ಐಎಂಎಫ್‌ನೊಂದಿಗಿನ ದೇಶದ ಮೀಸಲು ಸ್ಥಾನವು 276 ಮಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿ 5.145 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ABOUT THE AUTHOR

...view details