ಮುಂಬೈ:ಭಾರತದ ವಿದೇಶಿ ವಿನಿಮಯ ಮೀಸಲು ₹ 29.44 ಲಕ್ಷ ಕೋಟಿಯಷ್ಟು (426.42 ಬಿಲಿಯನ್ ಡಾಲರ್) ಹೆಚ್ಚಿದ್ದು, ಇದು ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿದೆ.
ಭಾರತಕ್ಕೆ ಹರಿದು ಬಂತು ದಾಖಲೆಯ ವಿದೇಶಿ ವಿನಿಮಯ ಮೀಸಲು ನಿಧಿ
ವಿದೇಶಿ ವಿನಿಮಯ ನಿಕ್ಷೇಪ ಪ್ರಮಾಣ 2018ರ ಏಪ್ರಿಲ್ 13ರ ವಾರದಲ್ಲಿ ದಾಖಲೆಯ ಗರಿಷ್ಠ ₹ 29.37 ಲಕ್ಷ ಕೋಟಿ (426.028 ಬಿಲಿಯನ್ ಡಾಲರ್) ಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು. ಹಿಂದಿನ ವಾರದಲ್ಲಿ ಮೀಸಲು ನಿಧಿ 9.36 ಲಕ್ಷ ಕೋಟಿ (1.358 ಡಾಲರ್) ಇಳಿಕೆಯಾಗಿ ₹ 29.11 ಲಕ್ಷ ಕೋಟಿಗೆ ತಲುಪಿದೆ
ಇದಕ್ಕೆ ಪೂರಕವಾಗಿ ವಿದೇಶಿ ಕರೆನ್ಸಿ ಸ್ವತ್ತುಗಳು ಕೂಡ ಗಮನಾರ್ಹ ಏರಿಕೆಯನ್ನು ಕಂಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.ವಿದೇಶಿ ವಿನಿಮಯ ನಿಕ್ಷೇಪ ಪ್ರಮಾಣ 2018ರ ಏಪ್ರಿಲ್ 13ರ ವಾರದಲ್ಲಿ ದಾಖಲೆಯ ಗರಿಷ್ಠ ₹ 29.37 ಲಕ್ಷ ಕೋಟಿ (426.028 ಬಿಲಿಯನ್ ಡಾಲರ್) ಬಂದಿದ್ದು,ಈವರೆಗಿನ ದಾಖಲೆಯಾಗಿತ್ತು. ಹಿಂದಿನ ವಾರದಲ್ಲಿ ಮೀಸಲು ನಿಧಿ 9.36 ಲಕ್ಷ ಕೋಟಿ (1.358 ಡಾಲರ್) ಇಳಿಕೆಯಾಗಿ ₹ 29.11 ಲಕ್ಷ ಕೋಟಿಗೆ ತಲುಪಿದೆ ಎಂದು ವಿವರಿಸಿದೆ.
ವಿದೇಶಿ ವಿನಿಮಯ ಸಂಗ್ರಹದಲ್ಲಿ ಪ್ರಮುಖ ಅಂಶವಾಗಿರುವ ವಿದೇಶಿ ಕರೆನ್ಸಿ ಆಸ್ತಿಯ ಹೆಚ್ಚಳದಿಂದಾಗಿ ಮೀಸಲು ನಿಧಿ ಹೆಚ್ಚಳವಾಗಿದೆ. ಒಂದೇ ವಾರದಲ್ಲಿ ವಿದೇಶಿ ಕರೆನ್ಸಿ ಸ್ವತ್ತು 4.202 ಬಿಲಿಯನ್ ಡಾಲರ್ ಏರಿಕೆಯಾಗಿ 398.649 ಬಿಲಿಯನ್ ಡಾಲರ್ಗೆ ತಲುಪಿದೆ.