ಕರ್ನಾಟಕ

karnataka

ETV Bharat / business

ಜಿಎಸ್​​ಟಿ ಕೊರತೆ ನಿಗೀಸಲು ₹ 1.1 ಲಕ್ಷ ಕೋಟಿ ಸಾಲ: ರಾಜ್ಯಗಳಿಗೆ ಸೀತಾರಾಮನ್​ ವಿವರಣಾತ್ಮಕ ಪತ್ರ! - ಕೇಂದ್ರ ಸಾಲ ಎತ್ತವ ಬಗ್ಗೆ ರಾಜ್ಯಗಳಿಗೆ ಹಣಕಾಸು ಸಚಿವೆ ಪತ್ರ

ಜಿಎಸ್​ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಪಾವತಿಸಬೇಕಾದ ಆದಾಯ ಕೊರತೆ ನೀಡಿಕೆಯಲ್ಲಿ ವಿಫಲವಾದ ನಾಲ್ಕು ದಿನಗಳ ನಂತರ ಕೇಂದ್ರ ಅವುಗಳ ಪರವಾಗಿ ಸಾಲ ಎತ್ತಲು ಒಪ್ಪಿಕೊಂಡಿದೆ. ಈಗ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

FM
ನಿರ್ಮಲಾ ಸೀತಾರಾಮನ್

By

Published : Oct 17, 2020, 3:54 PM IST

ನವದೆಹಲಿ: ಜಿಎಸ್‌ಟಿ ಕೊರತೆ ನೀಗಿಸಲು ರಾಜ್ಯಗಳ ಪರವಾಗಿ 1.10 ಲಕ್ಷ ಕೋಟಿ ರೂ. ಸಾಲ ಎತ್ತಲು ಕೇಂದ್ರ ಒಪ್ಪಿಕೊಂಡ ಒಂದು ದಿನದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ರಾಜ್ಯಗಳಿಗೆ ವಿಶೇಷ ಏಕಗವಾಕ್ಷಿಯ ಬಗ್ಗೆ ವಿವರಿಸಿದರು.

ಜಿಎಸ್​ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಪಾವತಿಸಬೇಕಾದ ಆದಾಯ ಕೊರತೆ ನೀಡಿಕೆಯಲ್ಲಿ ವಿಫಲವಾದ ನಾಲ್ಕು ದಿನಗಳ ನಂತರ ಕೇಂದ್ರ ಅವುಗಳ ಪರವಾಗಿ ಸಾಲ ಎತ್ತಲು ಒಪ್ಪಿಕೊಂಡಿದೆ. ಈಗ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ನಾವು ಈಗ ವಿಶೇಷ ವಿಂಡೋದ ಕೆಲವು ಪ್ರಮುಖ ಅಂಶಗಳನ್ನು ರೂಪಿಸಿದ್ದೇವೆ. ಅನೇಕ ರಾಜ್ಯಗಳ ಸಲಹೆಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಆರಂಭದಲ್ಲಿ ಈ ಮೊತ್ತ ಸ್ವೀಕರಿಸುತ್ತದೆ. ನಂತರ ಅದನ್ನು ಸಾಲವಾಗಿ ರಾಜ್ಯಗಳಿಗೆ ಹಿಂದಕ್ಕೆ ರವಾನಿಸುತ್ತದೆ ಎಂದು ನಿರ್ಧರಿಸಲಾಗಿದೆ. ಇದು ಅನುಕೂಲಕರ ಬಡ್ಡಿದರ ಹೊರತಾಗಿ ಸಾಲ ಪಡೆಯುವಲ್ಲಿ ಸಮನ್ವಯ ಮತ್ತು ಸರಳತೆಯನ್ನು ಸುಲಭಗೊಳಿಸುತ್ತದೆಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ವರ್ಷ ಪಾವತಿಸಬೇಕಾದ ಸಂಪೂರ್ಣ ಪರಿಹಾರ ಪೂರೈಸಲು ರಾಜ್ಯಕ್ಕೆ ಲಭ್ಯವಿರುವ ಸಂಪನ್ಮೂಲಗಳ ಪ್ರಮಾಣವು ಸಾಕಾಗುತ್ತದೆ. ಸೆಸ್​​ನ ಮುಂದಿನ ಆದಾಯದಿಂದ ಸಾಲ ಮತ್ತು ಅಸಲುಗಳನ್ನು ಪೂರೈಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರದ ಹಿಂದಿನ ನಿಲುವನ್ನು ವಿರೋಧಿಸಿದ ರಾಜ್ಯಗಳು ಜಿಎಸ್​​ಟಿ ಆದಾಯ ಸಂಗ್ರಹದ ಕೊರತೆ ಪೂರೈಸಲು ಕೇಂದ್ರ ಸರ್ಕಾರವು ಗುರುವಾರ 1,10,208 ಕೋಟಿ ರೂ. ಸಾಲ ಎತ್ತುವ ನಿರ್ಧಾರವನ್ನು ಮಾಜಿಬ ಃನಕಾಸು ಸಚಿವ/ ಕಾಂಗ್ರೆಸ್​ ಮುಖಂಡ ಪಿ.ಚಿದಂಬರಂ ಸ್ವಾಗತಿಸಿ ಇದು, ಸರಿಯಾದ ಮೊದಲ ಹೆಜ್ಜೆ ಎಂದರು.

ದೀರ್ಘ ಅವಧಿಯ ಸ್ಥೂಲ ಆರ್ಥಿಕ ಸ್ಥಿರತೆಯು ಕೇಂದ್ರದ ಜವಾಬ್ದಾರಿಯಾಗಿದೆ. ಆದರೆ ಇದು ನಮ್ಮ ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಪಾಲುದಾರರಾಗಿರುವ ರಾಜ್ಯಗಳ ಹಿತದೃಷ್ಟಿಯಿಂದ ಕೂಡಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details