ನವದೆಹಲಿ: ಕೊರೊನಾ ವೈರಸ್ನಿಂದಾಗಿ ಕುಸಿತ ಕಂಡಿರುವ ಆರ್ಥಿಕತೆಯನ್ನು ಮುನ್ನಡೆಸುವ ಪ್ರಯತ್ನಗಳ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಿಇಒಗಳೊಂದಿಗೆ ನಾಳೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ನಾಳೆ ಬ್ಯಾಂಕ್ಗಳ ಸಿಇಒಗಳೊಂದಿಗೆ ನಿರ್ಮಲಾ ಸೀತಾರಾಮನ್ ಸಭೆ - ನಾಳೆ ಬ್ಯಾಂಕ್ಗಳ ಸಿಇಒಗಳೊಂದಿಗೆ ನಿರ್ಮಲಾ ಸೀತಾರಾಮನ್ ಸಭೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕುಗಳ ಸಿಇಒಗಳೊಂದಿಗೆ ವಿಡಿಯೋ-ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಲಿದ್ದಾರೆ.
![ನಾಳೆ ಬ್ಯಾಂಕ್ಗಳ ಸಿಇಒಗಳೊಂದಿಗೆ ನಿರ್ಮಲಾ ಸೀತಾರಾಮನ್ ಸಭೆ nirmala](https://etvbharatimages.akamaized.net/etvbharat/prod-images/768-512-7283641-881-7283641-1590028424706.jpg)
nirmala
ಈ ಸಭೆಯನ್ನು ಈ ಮೊದಲು ಮೇ 11ರಂದು ನಿಗದಿಪಡಿಸಲಾಗಿತ್ತು. ಆದರೆ ಪ್ಯಾಕೇಜ್ ಪ್ರಕಟಣೆಗಳಿಂದಾಗಿ ಅದನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು.
ವಿಡಿಯೋ-ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಸಭೆಯಲ್ಲಿ, ಬಡ್ಡಿ ದರ ಹಾಗೂ ಸಾಲ ಮರುಪಾವತಿಯ ನಿಯಮಗಳ ಬದಲಾವಣೆಯ ಕುರಿತು ಚರ್ಚೆ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.