ನವದೆಹಲಿ:ಎನ್ಡಿಎ ಸರ್ಕಾರದ ಮೂರನೇ ಹಂತದಡಿಯ 10 ಬ್ಯಾಂಕ್ಗಳ ವಿಲೀನದಿಂದ ನೌಕರರು ಉದ್ಯೋಗಗಳನ್ನ ಕಳೆದುಕೊಳ್ಳಲಿದ್ದಾರೆ ಎಂಬ ಆಪಾದನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದಾರೆ.
ಬ್ಯಾಂಕ್ಗಳ ವಿಲೀನದಿಂದ ಒಂದೇ ಒಂದು ಹುದ್ದೆ ಕಡಿತವಾಗಲ್ಲ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಯ.. - merger of public sector banks
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯಿಂದ ಒಬ್ಬನೇ ಒಬ್ಬ ನೌಕರನೂ ಕೆಲಸ ಕಳೆದುಕೊಳ್ಳುವುದಿಲ್ಲ. ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
![ಬ್ಯಾಂಕ್ಗಳ ವಿಲೀನದಿಂದ ಒಂದೇ ಒಂದು ಹುದ್ದೆ ಕಡಿತವಾಗಲ್ಲ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಯ..](https://etvbharatimages.akamaized.net/etvbharat/prod-images/768-512-4311236-thumbnail-3x2-fm.jpg)
ಸೀತಾರಾಮನ್
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯಿಂದ ಒಬ್ಬನೇ ಒಬ್ಬ ನೌಕರನೂ ಕೆಲಸ ಕಳೆದುಕೊಳ್ಳುವುದಿಲ್ಲ. ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.ಬಂಡವಾಳ ಹೂಡಿಕೆ, ದೇಶದ ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ 10 ಬ್ಯಾಂಕ್ಗಳನ್ನು ನಾಲ್ಕು ಹಂತದಲ್ಲಿ ವಿಲೀನಗೊಳಿಸಲಾಗುತ್ತಿದೆ. ಇದರಿಂದ ಬ್ಯಾಂಕ್ಗಳ ನೌಕರರ ಹುದ್ದೆ ಕಳೆದುಕೊಳ್ಳುತ್ತಾರೆ ಎಂಬುದು ಸುಳ್ಳು. ನಾವು ಯಾವುದೇ ಉದ್ಯೋಗಿಯನ್ನು ತೆಗೆದು ಹಾಕುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.