ಬೆಂಗಳೂರು:ವಾಲ್ಮಾರ್ಟ್ ಒಡೆತನದ ಇಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಮಾರ್ಚ್‌ನಿಂದ ತನ್ನ ಪೂರೈಕೆ ಸರಪಳಿ ವಿಭಾಗದಲ್ಲಿ 23,000 ಜನರನ್ನು ವಿವಿಧ ಸಾಮರ್ಥ್ಯಗಳಲ್ಲಿ ನೇಮಿಸಿಕೊಂಡಿದೆ ಎಂದು ಕಂಪನಿ ತಿಳಿಸಿದೆ.
ವೈರಸ್ ವಿರುದ್ಧ ಹೋರಾಡಲು ಜನರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ದೇಶಾದ್ಯಂತ ಇ - ಕಾಮರ್ಸ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ನಮ್ಮ ಪೂರೈಕೆ ಸರಪಳಿಯನ್ನು ಹೆಚ್ಚಿಸುವ ಅಗತ್ಯವಿದೆ. ಹೀಗಾಗಿ, ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ಪರೀಕ್ಷಾ ಸಮಯದಲ್ಲಿ ಅವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಲ್ಲ ಹೊಸ ನೇಮಕಾತಿಗಳನ್ನು ನಮ್ಮ ಆರೋಗ್ಯ ಮತ್ತು ಕ್ಷೇಮ ಉಪಕ್ರಮಗಳೊಂದಿಗೆ ಕೈಗೊಳ್ಳಲಾಗುವುದು ಎಂದು ಫ್ಲಿಪ್‌ಕಾರ್ಟ್‌ನ ಸಪ್ಲೈ ಚೈನ್‌ನ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಹೇಳಿದರು.