ಕರ್ನಾಟಕ

karnataka

ETV Bharat / business

ಸೈನಿಕರಿಗೆ ಏಕಶ್ರೇಣಿ ಏಕ ಪಿಂಚಣಿ ಜಾರಿಯಾಗಿ 5 ವರ್ಷ: ಇದೊಂದು ಐತಿಹಾಸಿಕ ನಿರ್ಧಾರ ಎಂದ ನಮೋ - clearing of pending pensions

ಐದು ವರ್ಷಗಳ ಹಿಂದೆ, ನಮ್ಮ ರಾಷ್ಟ್ರವನ್ನು ಧೈರ್ಯದಿಂದ ರಕ್ಷಿಸುವ ನಮ್ಮ ಮಹಾನ್ ಸೈನಿಕರ ಯೋಗ ಕ್ಷೇಮ ಖಾತ್ರಿಪಡಿಸಿಕೊಳ್ಳಲು ಭಾರತವು ಒಂದು ಐತಿಹಾಸಿಕ ಹೆಜ್ಜೆ ತೆಗೆದುಕೊಂಡಿತ್ತು. 5 ವರ್ಷಗಳ ಒಆರ್​ಒಪಿ ಒಂದು ಮಹತ್ವದ ನಿರ್ಧಾರವಾಗಿದೆ ಎಂದು ಏಕಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

PM Modi
ನಮೋ

By

Published : Nov 7, 2020, 3:44 PM IST

ನವದೆಹಲಿ:ನಮ್ಮ ಸೈನಿಕರ ಯೋಗಕ್ಷೇಮ ಒದಗಿಸಲು ಸಶಸ್ತ್ರ ಪಡೆಗಳ ಯೋಧರಿಗೆ ಏಕಶ್ರೇಣಿ ಏಕ ಪಿಂಚಣಿ ಯೋಜನೆ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಒಆರ್​ಒಪಿ ಅನುಷ್ಠಾನದ ಐದನೇ ವಾರ್ಷಿಕೋತ್ಸವ ಸ್ವಾಗತಿಸಿ ಟ್ವೀಟ್​ ಮಾಡಿದ ಪ್ರಧಾನಿ ಮೋದಿ, ಐದು ವರ್ಷಗಳ ಹಿಂದೆ, ನಮ್ಮ ರಾಷ್ಟ್ರವನ್ನು ಧೈರ್ಯದಿಂದ ರಕ್ಷಿಸುವ ನಮ್ಮ ಮಹಾನ್ ಸೈನಿಕರ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಭಾರತವು ಒಂದು ಐತಿಹಾಸಿಕ ಹೆಜ್ಜೆಯನ್ನು ತೆಗೆದುಕೊಂಡಿತು. 5 ವರ್ಷಗಳ ಒಆರ್​ಒಪಿ ಒಂದು ಮಹತ್ವದ ನಿರ್ಧಾರವಾಗಿದೆ. ಭಾರತವು ಒಆರ್​ಒಪಿಗಾಗಿ ದಶಕಗಳವರೆಗೆ ಕಾಯುತ್ತಿತ್ತು. ಅವರ ಸೇವೆ ಗಮನಾರ್ಹವಾದದ್ದು ಎಂದರು.

ಸರ್ಕಾರದ ಅಂಕಿ ಅಂಶಗಳ ಪ್ರಕಾರ, 20.60 ಲಕ್ಷ ನಿವೃತ್ತ ಸೈನಿಕರು ಮತ್ತು ಕುಟುಂಬಸ್ಥರ ಪಿಂಚಣಿದಾರರಲ್ಲಿ ಬಾಕಿ ಇರುವ 10,795.4 ಕೋಟಿ ರೂ. ವಿತರಿಸಲಾಗಿದೆ. ಇದರ ವಾರ್ಷಿಕ ಮೊತ್ತ ಸುಮಾರು 7,123.38 ಕೋಟಿ ರೂ.ನಷ್ಟಿದೆ.

ABOUT THE AUTHOR

...view details