ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಕೊರೊನಾ ವೈರಸ್ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಳವಾಗುತ್ತಿದ್ದು, ಫಿಚ್ ರೇಟಿಂಗ್ಸ್ ಭಾರತಕ್ಕೆ 'ಬಿಬಿಬಿ' ಸಾವರಿನ್ ರೇಟಿಂಗ್ ನೀಡಿದೆ.
ಸೋಂಕಿನ ಪ್ರಕರಣಗಳು ಜಿಡಿಪಿ ಚೇತರಿಕೆಗೆ ವಿಳಂಬವಾಗಬಹುದು. ಆದರೆ, ಇದು ಆರ್ಥಿಕತೆ ಹದಗೆಡಿಸುವುದಿಲ್ಲ. ಈಗಿನ ಪರಿಸ್ಥಿತಿ ಸಾಲದ ಸುತ್ತಲೂ ದೀರ್ಘಕಾಲದ ಅನಿಶ್ಚಿತತೆ ಪ್ರತಿಬಿಂಬಿಸುವ ರೇಟಿಂಟ್ಗಾಗಿ ನಕಾರಾತ್ಮಕ ದೃಷ್ಟಿಕೋನ ಉಳಿಸಿಕೊಂಡಿದೆ.
2022ರ ಮಾರ್ಚ್ (2022ರ ಹಣಕಾಸು ವರ್ಷ) ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಜಿಡಿಪಿಯಲ್ಲಿ ಶೇ 12.8ರಷ್ಟು ಚೇತರಿಕೆ ಕಂಡುಬರಲಿದೆ. ಇದು 2023ರ ಹಣಕಾಸು ವರ್ಷದಲ್ಲಿ ಶೇ 5.8ಕ್ಕೆ ಏರಿಕೆಯಾಗಲಿದೆ. 2021ರ ವಿತ್ತೀಯ ವರ್ಷದಲ್ಲಿ ಶೇ 7.5ರಷ್ಟು ಸಂಕೋಚನವಾಗಿದೆ ಎಂದು ಹೇಳಿದೆ.
ಕೊರೊನಾ ವೈರಸ್ ಪ್ರಕರಣಗಳಲ್ಲಿನ ಇತ್ತೀಚಿನ ಉಲ್ಬಣವು 2022ರ ಹಣಕಾಸು ವರ್ಷದ ದೃಷ್ಟಿಕೋನಕ್ಕೆ ಹೆಚ್ಚುತ್ತಿರುವ ತೊಂದರೆಯ ಅಪಾಯಗಳನ್ನು ಉಂಟುಮಾಡುತ್ತದೆ. ಈ ಎರಡನೇ ಅಲೆಯ ವೈರಸ್ ಪ್ರಕರಣಗಳು ಚೇತರಿಕೆಗೆ ವಿಳಂಬವಾಗಬಹುದು ಎಂದಿದೆ.
ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳು ಸ್ಥಳೀಯವಾಗಿ ಹೇರಲಾಗುತ್ತದೆ. 2020ರಲ್ಲಿ ವಿಧಿಸಲಾದ ರಾಷ್ಟ್ರೀಯ ಲಾಕ್‌ಡೌನ್‌ಗಿಂತ ಕಡಿಮೆ ಕಠಿಣವಾಗಿರುತ್ತವೆ ಎಂದು ನಿರೀಕ್ಷಿಸಿದ್ದು, ಲಸಿಕೆ ಹಂಚಿಕೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಿದೆ.