ನವದೆಹಲಿ:ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೀಮಿತ ಅವಧಿಗೆ ಕೋವಿಡ್-19 ಪರಿಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲಿನ ಮೂಲ ಸೀಮಾ ಸುಂಕ ಮತ್ತು ಆರೋಗ್ಯ ಸೆಸ್ನಿಂದ ವಿನಾಯ್ತಿ ನೀಡಲಾಗಿದೆ ಎಂದು ತಿಳಿಸಿದೆ.
2021ರ ಅಕ್ಟೋಬರ್ 31ರವರೆಗೆ ರೆಮ್ಡೆಸಿವಿರ್ ಇಂಜಕ್ಷನ್/ಎಪಿಐ ಮತ್ತು ಬೀರಾ ಸೈಕ್ಲೋಡೆಕ್ಸಟ್ರಿನ್ (ಎಸ್ ಬಿಇಬಿಸಿಡಿ), ಇನ್ ಫ್ಲೇಮಟೊರಿ ಡಯಾಗ್ನಾಸ್ಟಿಕ್ (ಮೇಕರ್ಸ್ ) ಕಿಟ್ ಹಾಗೂ ಜುಲೈ 31ರವರೆಗೆ ವೈದ್ಯಕೀಯ ದರ್ಜೆ ಆಮ್ಲಜನಕ, ಆಕ್ಸಿಜನ್ ಥೆರಪಿಗೆ ಸಂಬಂಧಿಸಿದ ಆಕ್ಸಿಜಲ್ ಕ್ರಾನ್ಸಟ್ರೆಟರ್, ಕ್ರಯೋಜೆನಿಕ್ ಟ್ರಾನ್ಸ್ ಪೋರ್ಟ್ ಟ್ಯಾಂಕ್, ಕೋವಿಡ್ ಲಸಿಕೆ ಸೇರಿದಂತೆ ಇತರ ಸಾಮಗ್ರಿಗಳಿಗೆ ವಿನಾಯಿತಿ ಕೊಡಲಾಗಿದೆ.
ಉಚಿತ ವಿತರಣೆಗಾಗಿ ಭಾರತದಿಂದ ಹೊರಗೆ ಸ್ವೀಕರಿಸಲಾದ/ದೇಣಿಗೆ ಪಡೆಯಲಾದ ಕೋವಿಡ್-19 ಪರಿಹಾರ ಸಾಮಗ್ರಿಗಳಿಗೆ ಐಜಿಎಸ್ಟಿಯಿಂದದ ವಿನಾಯ್ತಿ ನೀಡಬೇಕೆಂದು ಹಲವು ಚಾರಿಟಬಲ್ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರ ಸಂಘ - ಸಂಸ್ಥೆಗಳು ಕೇಂದ್ರ ಮನವಿ ಮಾಡಿದ್ದವು.
ಈ ವಿನಾಯ್ತಿ 2021ರ ಜೂನ್ 30ರವರೆಗೆ ಅನ್ವಯವಾಗಲಿದೆ. ಈ ಆದೇಶ ಈಗಾಗಲೇ ಆಮದು ಮಾಡಿಕೊಂಡಿರುವ ಹಾಗೂ ಇಂದಿನವರೆಗೆ ವಿತರಣೆಯಾಗದ ಸಾಮಗ್ರಿಗಳಿಗೂ ಅನ್ವಯವಾಗಲಿದೆ.
ಈ ವಿನಾಯ್ತಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಬೇಕು. ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017ರ ಸೆಕ್ಷನ್ 2 (103) ಅನ್ವಯ ಕೇಂದ್ರಾಡಳಿತ ಪ್ರದೇಶವೂ ಸೇರಿದೆ.
ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ವ್ಯಕ್ತಿ ಯಾವುದೇ ಸಂಸ್ಥೆ, ಯಾವುದೇ ಏಜೆನ್ಸಿ ಅಥವಾ ಶಾಸನಬದ್ಧ ಸಂಸ್ಥೆಯನ್ನು ಉಚಿತ ಕೋವಿಡ್ ಪರಿಹಾರ ಸಾಮಗ್ರಿ ವಿತರಣೆಗಾಗಿ ಅನುಮೋದಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸರಕುಗಳನ್ನು ರಾಜ್ಯ ಸರ್ಕಾರದಿಂದ ಉಚಿತವಾಗಿ ಆಮದು ಮಾಡಿಕೊಳ್ಳಬೇಕು. ಯಾವುದೇ ಸಂಸ್ಥೆ/ಪರಿಹಾರ ನೀಡುವ ಏಜೆನ್ಸಿ/ ಕಾನೂನುಬದ್ಧ ಸಂಸ್ಥೆಯನ್ನು ಆ ನಿಟ್ಟಿನಲ್ಲಿ ದೇಶದ ಯಾವುದೇ ಭಾಗದಲ್ಲಿ ಉಚಿತ ವಿತರಣೆಗೆ ಅನುಮೋದಿಸುವ ಅಧಿಕಾರ ಹೊಂದಿದೆ.
ಕಸ್ಟಮ್ಸ್ ಸರಕುಗಳನ್ನು ತೆರವುಗೊಳಿಸುವ ಮೊದಲು ಆಮದುದಾರರು ಕೋವಿಡ್ ಉಚಿತ ಪರಿಹಾರಕ್ಕಾಗಿ ಉಚಿತ ವಿತರಣೆಗೆ ಸರಕುಗಳನ್ನು ಹೊಂದಲಾಗಿದೆ ಎಂದು ನೋಡಲ್ ಅಧಿಕಾರಿಯಿಂದ ಪ್ರಮಾಣಪತ್ರ ಪಡೆಯಬೇಕು. ಆಮದು ಮಾಡಿಕೊಂಡ ನಂತರ ಆಮದು ಮಾಡಿಕೊಂಡ ದಿನಾಂಕದಿಂದ ಆರು ತಿಂಗಳ ಅವಧಿಯಲ್ಲಿ ಅಥವಾ 9 ತಿಂಗಳು ಮೀರದಂತೆ ವಿಸ್ತೃತ ಅವಧಿಯಲ್ಲಿ ಆಮದುದಾರರು ಬಂದರಿನಲ್ಲಿರುವ ಸಹಾಯಕ ಕಸ್ಟಮ್ಸ್ ಆಯುಕ್ತರಿಗೆ ಆಮದು ಮಾಡಿಕೊಂಡ ಮತ್ತು ಉಚಿತವಾಗಿ ವಿತರಿಸಿದ ವಸ್ತುಗಳ ಸರಳ ಘೋಷಣೆ ಸಲ್ಲಿಸಬೇಕು. ಅದನ್ನು ನೋಡಲ್ ಅಧಿಕಾರಿ ಪ್ರಮಾಣೀಕರಿಸಬೇಕು.