ನವದೆಹಲಿ: ಏಳು ತಿಂಗಳ ಅಂತರದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಮನ್ ಅವರ ಅಧ್ಯಕ್ಷತೆಯಲ್ಲಿ 43ನೇ ಸರಕು ಮತ್ತು ಸೇವಾ ತರಿಗೆಯ (ಜಿಎಸ್‌ಟಿ) ಮಂಡಳಿ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.
ಅನುಸರಣೆ ಹೊರೆ ಸರಾಗಗೊಳಿಸುವ ಅಮ್ನೆಸ್ಟಿ ಯೋಜನೆ ಶೇ 89ರಷ್ಟು ಜಿಎಸ್‌ಟಿ ತೆರಿಗೆದಾರರು ಸಣ್ಣ ತೆರಿಗೆದಾರರು ಈಗ ಅಮ್ನೆಸ್ಟಿ ಯೋಜನೆಯಡಿ ಬಾಕಿ ಇರುವ ತೆರಿಗೆಗಳನ್ನು ಸಲ್ಲಿಸಬಹುದು. ಇದರಿಂದ ಹೆಚ್ಚಿನ ಹೊರೆ ಆಗುವುದಿಲ್ಲ. ಸಣ್ಣ ತೆರಿಗೆದಾರರಿಗೆ ಈ ಆಯ್ಕೆ ಲಭ್ಯವಿರುತ್ತದೆ. 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಯಾರಿಗೂ ವಿನಾಯಿತಿ ನೀಡಲಾಗುವುದಿಲ್ಲ. ಪರಿಹಾರ ಸೆಸ್ 2022ರ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಎಸ್‌ಟಿ ಮಂಡಳಿ ನಂತರ ವಿಶೇಷ ಸಭೆ ಕರೆದು ಚರ್ಚಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಂಫೊಟೆರಿಸಿನ್ ಬಿ ಔಷಧವನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.
ಅಗತ್ಯ ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆ ತೆಗೆದು ಹಾಕಿ: ರಾಜ್ಯಗಳ ಕೋರಿಕೆ
ಕೋವಿಡ್-19 ಲಸಿಕೆ, ಆಮ್ಲಜನಕ ಸಿಲಿಂಡರ್, ಸಾಂದ್ರಕ, ಆಕ್ಸಿಮೀಟರ್, ಪಿಪಿಇ ಕಿಟ್, ಸ್ಯಾನಿಟೈಜರ್ ಮತ್ತು ಇತರ ಅಗತ್ಯ ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಲು ನಾವು ಪ್ರಸ್ತಾಪಿಸಿದ್ದೇವೆ. ಪಂಜಾಬ್, ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳೂ ಇದೇ ವಿನಾಯಿತಿ ಕೋರಿವೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.