ಕರ್ನಾಟಕ

karnataka

ನವೆಂಬರ್​ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 13ರಷ್ಟು ಏರಿಕೆ: ಸಿಯಾಮ್

By

Published : Dec 12, 2020, 4:35 AM IST

ನವೆಂಬರ್ ತಿಂಗಳಲ್ಲಿ ಸಗಟು ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಪ್ರಯಾಣಿಕರ ವಾಹನಗಳು ಶೇ 12.73ರಷ್ಟು ಮತ್ತು ದ್ವಿಚಕ್ರ ವಾಹನಗಳು ಶೇ 13.43 ರಷ್ಟು ಏರಿಕೆಯಾಗಿದೆ. ಹಬ್ಬದ ಋತುವಿನ ಕಾರಣದಿಂದ ಮಾರಾಟ ಹೆಚ್ಚಳವಾಗಿದೆ ಎಂದು ಸಿಯಾಮ್ ನಿರ್ದೇಶಕ ಜನರಲ್ ರಾಜೇಶ್ ಮೆನನ್ ಹೇಳಿದರು.

vehicle sales
ಪ್ರಯಾಣಿಕ ವಾಹನ

ನವದೆಹಲಿ:ಭಾರತದಲ್ಲಿ ಪ್ರಯಾಣಿಕರ ವಾಹನ ಸಗಟು ಮಾರಾಟ ನವೆಂಬರ್‌ನಲ್ಲಿ ಶೇ 12.73ರಷ್ಟು ಏರಿಕೆಯಾಗಿ 2,85,367 ಯೂನಿಟ್​ಗಳಿಗೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 2,53,139 ಯೂನಿಟ್‌ಗಳು ಹಬ್ಬದ ಬೇಡಿಕೆಯ ಹಿನ್ನಲೆಯಲ್ಲಿ ಮಾರಾಟ ಹೆಚ್ಚಳವಾಗಿದೆ ಎಂದು ವಾಹನ ಉದ್ಯಮ ಸಂಸ್ಥೆ ಸಿಯಾಮ್ ತಿಳಿಸಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್) ಒಕ್ಕೂಟದ ಇತ್ತೀಚಿನ ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನಗಳ ಮಾರಾಟವು ಶೇ 13.43ರಷ್ಟು ಏರಿಕೆಯಾಗಿ 16,00,379 ಯೂನಿಟ್​ಗಳಿಗೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 14,10,939 ಯೂನಿಟ್ ಮಾರಾಟವಾಗಿದ್ದವು.

ವಾಣಿಜ್ಯ ದೈತ್ಯ ಅಮೆಜಾನ್ ದಾಖಲೆ; ನವೀಕರಿಸಲ್ಪಡುವ ಇಂಧನ ಯೋಜನೆ ಖರೀದಿ

ಮೋಟರ್​ಸೈಕಲ್ ಮಾರಾಟವು 10,26,705 ಯುನಿಟ್ ಆಗಿದ್ದು, 2019ರ ನವೆಂಬರ್​ನಲ್ಲಿ 8,93,538 ಯೂನಿಟ್​ಗಳಾಗಿದ್ದವು. ಇದು ಶೇ 14.9ರಷ್ಟು ಹೆಚ್ಚಾಗಿದೆ. ಸ್ಕೂಟರ್ ಮಾರಾಟ ಕೂಡ ಶೇ 9.29ರಷ್ಟು ಏರಿಕೆ ಕಂಡು 5,02,561 ಯುನಿಟ್​ಗೆ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ 4,59,851 ಯೂನಿಟ್ ಮಾರಾಟವಾಗಿದವು.

ತ್ರಿಚಕ್ರ ಮಾರಾಟವು ಕಳೆದ ತಿಂಗಳು ಶೇ 57.64ರಷ್ಟು ಕುಸಿದು 23,626ಕ್ಕೆ ತಲುಪಿದೆ. 2019ರ ನವೆಂಬರ್‌ನಲ್ಲಿ 55,778 ಯೂನಿಟ್‌ಗಳಷ್ಟಿತ್ತು.

ನವೆಂಬರ್ ತಿಂಗಳಲ್ಲಿ ಸಗಟು ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಪ್ರಯಾಣಿಕರ ವಾಹನಗಳು ಶೇ 12.73ರಷ್ಟು ಮತ್ತು ದ್ವಿಚಕ್ರ ವಾಹನಗಳು ಶೇ 13.43 ರಷ್ಟು ಏರಿಕೆಯಾಗಿದೆ. ಹಬ್ಬದ ಋತುವಿನ ಕಾರಣದಿಂದ ಮಾರಾಟ ಹೆಚ್ಚಳವಾಗಿದೆ ಎಂದು ಸಿಯಾಮ್ ನಿರ್ದೇಶಕ ಜನರಲ್ ರಾಜೇಶ್ ಮೆನನ್ ಹೇಳಿದರು.

ABOUT THE AUTHOR

...view details