ಮಿಲನ್: ವಿಶ್ವದ ಅತ್ಯಂತ ಐಶಾರಾಮಿ ಸ್ಪೋರ್ಟ್ಸ್ ಕಾರು ತಯಾರಿಕಾ ಸಂಸ್ಥೆ ಫೆರಾರಿ ಸಿಇಒ ಲೂಯಿಸ್ ಕ್ಯಾಮಿಲ್ಲೆರಿ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಫೆರಾರಿ ಸಂಸ್ಥೆ ಸ್ಪಷ್ಟಪಡಿಸಿದೆ. ಹೊಸದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಆಯ್ಕೆಯಾಗುವವರಿಗೆ ಚೇರ್ಮನ್ ಜಾನ್ ಎಲ್ಕಾನ್ ಸಿಇಒ ಹುದ್ದೆಯನ್ನ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಫೆರಾರಿ ಸಿಇಒ ಹುದ್ದೆಗೆ ಲೂಯಿಸ್ ಕ್ಯಾಮಿಲ್ಲೇರಿ ರಾಜೀನಾಮೆ - ಜಾನ್ ಎಲ್ಕಾನ್
ಫೆರಾರಿ ಕಾರು ಸಂಸ್ಥೆಯ ಸಿಇಒ ಹುದ್ದೆಗೆ ಲೂಯಿಸ್ ಕ್ಯಾಮಿಲ್ಲೆರಿ ಗುಡ್‌ಬೈ ಹೇಳಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಫೆರಾರಿ ಹೇಳಿಕೆ ಬಿಡುಗಡೆ ಮಾಡಿದೆ.
![ಫೆರಾರಿ ಸಿಇಒ ಹುದ್ದೆಗೆ ಲೂಯಿಸ್ ಕ್ಯಾಮಿಲ್ಲೇರಿ ರಾಜೀನಾಮೆ Ferrari CEO resigns 2 years after replacing Marchionne](https://etvbharatimages.akamaized.net/etvbharat/prod-images/768-512-9846380-thumbnail-3x2-car.jpg)
ಕಂಪನಿಯಲ್ಲಿ ದೀರ್ಘಕಾಲದ ಸಿಇಒ ಆಗಿದ್ದ ಸೆರ್ಗಿಯೋ ಮಾರ್ಚಿಯೊನ್ನೆ ನಿಧನದ ಬಳಿಕ ಅಂದರೆ 2018ರಲ್ಲಿ ಕ್ಯಾಮಿಲೇರಿ ಈ ಹುದ್ದೆಯನ್ನು ವಹಿಸಿಕೊಂಡಿದ್ದರು. ಲೂಯಿಸ್‌ಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಹುದ್ದೆ ತೊರೆಯುತ್ತಿರುವುದಕ್ಕೆ ನಿಖರವಾದ ಕಾರಣ ತಿಳಿಯದಿದ್ರೂ ಕಂಪನಿಯಲ್ಲಿನ ಒತ್ತಡದಿಂದಲೇ ಸಿಇಒ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ ಎನ್ನಲಾಗುತ್ತಿದೆ.
2018ರಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಲೂಯಿಸ್, ಫೆರಾರಿಗೆ ಹೊಸ ಸ್ಪರ್ಶ ನೀಡಿದ್ದರು. ಹಲವು ಹೊಸ ಮಾದರಿ ಕಾರುಗಳನ್ನು ಪರಿಚಯಿಸಲಾಗಿತ್ತು. ಫಾರ್ಮುಲಾ 1 ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ಗ್ಯಾಸೋಲಿನ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲಾಗಿತ್ತು. ಕೋವಿಡ್‌ನಿಂದಾಗಿ ಇಟಲಿಯಲ್ಲಿನ ಫೆರಾರಿ ಕಾರು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಬಳಿಕ ಮೂರನೇ ತ್ರೈಮಾಸಿಕದಲ್ಲಿ ಲಾಭಾಂಶ ಕುಸಿತ ಕಂಡಿತ್ತು. ಮಾತ್ರವಲ್ಲದೇ ಕಾರುಗಳ ಮಾರಾಟದಲ್ಲಿ ಇಳಿಕೆ ಕಂಡಿತ್ತು.