ನವದೆಹಲಿ: ಸಾಮಾನ್ಯ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) ಹಿಂದಿನ ವರ್ಷಕ್ಕಿಂತ 2019-20ರ ಹಣಕಾಸು ವರ್ಷದಲ್ಲಿ 509.07 ಕೋಟಿ ರೂ.ಗೆ ಕುಸಿದಿದೆ ಎಂದು ಸಾಮಾನ್ಯ ವಿಮಾ ಮಂಡಳಿ (ಜಿಐಸಿ) ತಿಳಿಸಿವೆ.
2018-19ರ ಹಣಕಾಸು ವರ್ಷದಲ್ಲಿ ಜೀವರಹಿತ ವಿಮಾ ವಿಭಾಗ 516.61 ಕೋಟಿ ರೂ. ಎಫ್‌ಡಿಐ ಆಕರ್ಷಿಸಿತ್ತು. 2000 ಸಾಲಿನಲ್ಲಿ ವಿಮಾ ಮಾರುಕಟ್ಟೆ ಪ್ರಾರಂಭವಾದಾಗಿನಿಂದ, ಜೀವೇತರ ವಲಯವು ಮಾರ್ಚ್ 2020ರ ವೇಳೆಗೆ ಒಟ್ಟು 4,721.68 ಕೋಟಿ ರೂ.ಗೆ ತಲುಪಿದೆ.
ನಾಲ್ಕು ಸಾರ್ವಜನಿಕ ವಲಯದ ವಿಮೆದಾರರ, ಆರು ಇಂಡಿಪೆಂಡೆಂಟ್ ಆರೋಗ್ಯ ವಿಮೆಗಾರರು ಮತ್ತು ಎರಡು ಸರ್ಕಾರಿ ಸ್ವಾಮ್ಯದ ವಿಶೇಷ ಕಂಪನಿಗಳಾದ ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (ಎಐಸಿ) ಸೇರಿ 33 ಜನರಲ್ ವಿಮಾದಾರರು ಇದ್ದಾರೆ.
ಬೆಳ್ಳಿ ದರದಲ್ಲಿ 407 ರೂ. ಹೆಚ್ಚಳ: ಇಲ್ಲಿದೆ ಈ ದಿನದ ಬಂಗಾರ ಬೆಲೆ..
ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಹಿಂದಿನ ಮಟ್ಟಕ್ಕಿಂತ ಶೇ 49ಕ್ಕೆ ಏರಿಸಲಾಗಿದೆ. ವಿಮಾ ವಲಯದಲ್ಲಿ 2000ರ ಆಗಸ್ಟ್ನಲ್ಲಿ ಖಾಸಗಿ ಕಂಪನಿ ವಿಮಾದಾರರಿಗೆ ಮುಕ್ತ ಅವಕಾಶ ನೀಡಲಾಯಿತು. ವಿದೇಶಿ ಕಂಪನಿಗಳಿಗೆ ಶೇ 26ರ ತನಕ ಮಾಲೀಕತ್ವ ನೀಡಲಾಯಿತು.