ನವದೆಹಲಿ:2020ರಿಂದ ಬಿಎಸ್-4 ವಾಹನಗಳ ಮಾರಾಟವನ್ನು ದೇಶದಲ್ಲಿ ನಿಷೇಧಿಸಲಾಗುವುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಈ ಕುರಿತು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಬಿಎಸ್-4 ವಾಹನ ಮಾರಾಟದ ಗಡವು ವಿಸ್ತರಿಸಿ.. ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ ಎಫ್‌ಎಡಿಎ.. - ಬಿಎಸ್-4 ವಾಹನ ನಿಷೇಧದ ಬಗ್ಗೆ ಆದೇಶ
ಹಿಂದಿನ ವರ್ಷ ಸುಪ್ರೀಂಕೋರ್ಟ್ ಬಿಎಸ್-4 ವಾಹನ ನಿಷೇಧದ ಬಗ್ಗೆ ಆದೇಶ ನೀಡಿದ್ದು, ಇಂದು ಈ ವಾಹನಗಳ ಮಾರಾಟದ ಗಡುವು ವಿಸ್ತರಿಸುವಂತೆ ಎಫ್ಡಿಎ ಮನವಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಎಫ್‌ಎಡಿಎ
ಸುಪ್ರೀಂಕೋರ್ಟ್, ಕಳೆದ ವರ್ಷವಷ್ಟೇ 2020 ಏಪ್ರಿಲ್ 1ರಿಂದ ಬಿಎಸ್-4 ಹಂತದ ವಾಹನಗಳ ಮಾರಾಟ ನಿಷೇಧ ಮಾಡಲಾಗುವುದು ಎಂಬ ಆದೇಶ ನೀಡಿತ್ತು. ಇದೀಗ ಎಫ್‌ಎಡಿಎ 2019ರಲ್ಲಿ ಖರೀದಿ ಮಾಡಿರುವ ಹಾಗೂ ಬಾಕಿ ಉಳಿದಿರುವ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
ನಾವು ಈಗಾಗಲೇ ನ್ಯಾಯಾಲಕ್ಕೆ ಮನವಿ ಸಲ್ಲಿಸಿದ್ದು, ಮಾರಾಟವಾಗದೆ ಉಳಿದಿರುವ ವಾಹನಗಳಿಗೆ ಈ ಗಡುವನ್ನು ವಿಸ್ತರಿಸಬೇಕು ಅಥವಾ ಸೂಕ್ತ ಪರಿಹಾರನೀಡಬೇಕು ಎಂದು ಕೇಳಿಕೊಳ್ಳಲಾಗಿದೆ ಎಂದು ಎಫ್‌ಎಡಿಎ ಅಧ್ಯಕ್ಷ ಆಶಿಶ್ ಹರ್ಷರಾಜ್ ಕಾಳೆ ತಿಳಿಸಿದ್ದಾರೆ.