ನವದೆಹಲಿ:ಕೊರೊನಾ ಮತ್ತು ಇತರ ಆರೋಗ್ಯ ಸಂಬಂಧಿತ ತಪ್ಪು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತೆಗೆದುಹಾಕಲು 'ದಿ ಹೆಲ್ದಿ ಇಂಡಿಯನ್ ಪ್ರಾಜೆಕ್ಟ್' (THIP)ನೊಂದಿಗೆ ಫೇಸ್‌ಬುಕ್ ಕೈಜೋಡಿಸಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್ ಮತ್ತು ಇನ್‌ಸ್ಟಾಗ್ರಾಂನಾದ್ಯಂತ 18 ದಶಲಕ್ಷಕ್ಕೂ ಹೆಚ್ಚು ಹಾನಿಕಾರಕ ತಪ್ಪು ಮಾಹಿತಿಗಳನ್ನು ತೆಗೆದುಹಾಕಿತ್ತು. ಜೊತೆಗೆ ಫ್ಯಾಕ್ಟ್ ಚೆಕ್ಕಿಂಗ್ ಸಹಾಯದಿಂದ 167 ದಶಲಕ್ಷಕ್ಕೂ ಹೆಚ್ಚು ನಕಲಿ ಸುದ್ದಿ ಪೋಸ್ಟ್‌ಗಳನ್ನು ಲೇಬಲ್ ಮಾಡಿದೆ.
THIP ಜೊತೆಗಿನ ಪಾಲುದಾರಿಕೆಯಲ್ಲಿ ಆರೋಗ್ಯ ಸಂಬಂಧಿತ ತಪ್ಪು ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿಗ್ರಹಿಸಲು ಸಹಾಯವಾಗಿದೆ ಎಂದು ಫೇಸ್‌ಬುಕ್ ಹೇಳಿದೆ. ಇನ್ನು ಇಂಗ್ಲಿಷ್, ಹಿಂದಿ, ಬೆಂಗಾಲಿ, ಪಂಜಾಬಿ ಮತ್ತು ಗುಜರಾತಿ ಭಾಷೆಗಳಲ್ಲಿರುವ ಆರೋಗ್ಯ, ಔಷಧಗಳು, ಆಹಾರ ಮತ್ತು ಚಿಕಿತ್ಸೆಯ ಬಗ್ಗೆ ದಾರಿತಪ್ಪಿಸುವ ಸುದ್ದಿಗಳನ್ನು ತೆಗೆದುಹಾಕಲು ಫ್ಯಾಕ್ಟ್ ಚೆಕ್ಕಿಂಗ್ ತಂಡ ವೈದ್ಯಕೀಯ ವೃತ್ತಿಪರರೊಂದಿಗೆ ಕೆಲಸ ಮಾಡಿದೆ.
ಜಾಗತಿಕವಾಗಿ, 60 ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಷಯ ಮೇಲ್ವಿಚಾರಣೆಗೆ ಸಹಾಯ ಮಾಡುವ 80 ಫ್ಯಾಕ್ಟ್ - ಚೆಕ್ಕಿಂಗ್ ಪಾಲುದಾರರೊಂದಿಗೆ ಫೇಸ್‌ಬುಕ್ ಕಾರ್ಯನಿರ್ವಹಿಸುತ್ತಿದೆ. ಫೇಸ್‌ಬುಕ್‌ನ ಸತ್ಯ - ಪರಿಶೀಲನೆ ಪಾಲುದಾರರಿಗೆ ಸ್ವತಂತ್ರ, ಪಕ್ಷೇತರ ಇಂಟರ್ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ ಮೂಲಕ ಪ್ರಮಾಣೀಕರಿಸಲಾಗಿದೆ.