ನವದೆಹಲಿ:ದೇಶದಲ್ಲಿ ಸ್ಥಳೀಯವಾಗಿ ಗಳಿಸಿದ ಲಾಭಕ್ಕಾಗಿ ಜಾಗತಿಕ ಡಿಜಿಟಲ್ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ಟ್ವಿಟರ್‌ಗೆ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತಿಸುತ್ತಿದೆ.
ಕೇಂದ್ರದ ಮಾಸ್ಟರ್ ಸ್ಟ್ರೋಕ್ಗೆ ಬೆಚ್ಚಿದ Google, Facebook, ಟ್ವಿಟರ್ - ಟ್ವಿಟರ್
ವಾರ್ಷಿಕ 20 ಕೋಟಿ ಬಂಡವಾಳ ಹೊಂದಿರುವ ಅಥವಾ 5 ಲಕ್ಷ ಬಳಕೆದಾರರು ಇರುವ ಸಾಮಾಜಿಕ ಜಾಲತಾಣ ಕಂಪನಿಗಳನ್ನು ನೇರ ತೆರಿಗೆ ಸಾಲಿಗೆ ಸೇರ್ಪಡೆಗೊಳಿಸಲು ಸರ್ಕಾರ ಮುಂದಾಗಿದೆ.

ಸಾಂದರ್ಭಿಕ ಚಿತ್ರ
ವಾರ್ಷಿಕ 20 ಕೋಟಿ ಬಂಡವಾಳ ಹೊಂದಿರುವ ಅಥವಾ 5 ಲಕ್ಷ ಬಳಕೆದಾರರು ಇರುವ ಸಾಮಾಜಿಕ ಜಾಲತಾಣ ಕಂಪನಿಗಳನ್ನು ನೇರ ತೆರಿಗೆ ಸಾಲಿಗೆ ಸೇರ್ಪಡೆಗೊಳಿಸಲು ಸರ್ಕಾರ ಮುಂದಾಗಿದೆ.
ದೇಶದಲ್ಲಿ ಕಾರ್ಯನಿರತ ಜಾಗತಿಕ ಡಿಜಿಟಲ್ ಕಂಪನಿಗಳಿಗೆ ತೆರಿಗೆ ವಿಧಿಸುವ ನಿರ್ಧಾರವನ್ನು 2018ರ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿತ್ತು. ಹಣಕಾಸು ಕಾಯಿದೆ 2018ರ ಮೂಲಕ, ವ್ಯವಹಾರ ಸಂಪರ್ಕದ ವ್ಯಾಖ್ಯಾನದ ವ್ಯಾಪ್ತಿಯನ್ನು ಹೆಚ್ಚಿಸಿ ಭಾರತದಲ್ಲಿನ ಅನಿವಾಸಿ ಅಥವಾ ಜಾಗತಿಕ ಡಿಜಿಟಲ್ ಕಂಪನಿಗಳಿಗೆ ತೆರಿಗೆ ವಿಧಿಸುವ ಆದಾಯ ಕಾಯ್ದೆಯಲ್ಲಿ ಎಸ್ಇಪಿ ಪರಿಕಲ್ಪನೆ ಪರಿಚಯಿಸಲಾಗಿತ್ತು.