ನವದೆಹಲಿ:ಫೆಬ್ರವರಿಯಲ್ಲಿ ಭಾರತದ ರಫ್ತು ಪ್ರಮಾಣ ಶೇ 0.67ರಷ್ಟು ಏರಿಕೆ ಕಂಡು 27.93 ಬಿಲಿಯನ್ ಡಾಲರ್‌ಗೆ ತಲುಪಿದೆ. ಆಮದು ಶೇ 6.96ರಷ್ಟು ಹೆಚ್ಚಳವಾಗಿ 40.54 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಸೋಮವಾರ ಬಿಡುಗಡೆಯಾದ ಸರ್ಕಾರದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಹಿಂದಿನ ವರ್ಷದ 10.16 ಬಿಲಿಯನ್ ಡಾಲರ್ ಹೋಲಿಸಿದರೆ, ಫೆಬ್ರವರಿಯಲ್ಲಿ ವ್ಯಾಪಾರ ಕೊರತೆಯು 12.62 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
2020-21ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ರಫ್ತು ಶೇ 12.23ರಷ್ಟು ಕುಸಿದು 256.18 ಶತಕೋಟಿ ಡಾಲರ್‌ಗೆ ತಲುಪಿದೆ. ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಆಮದು ಶೇ 23.11ರಷ್ಟು ತಗ್ಗಿ 340.8 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಇದನ್ನೂ ಓದಿ: ರೂಪಾಯಿ ಮೌಲ್ಯ ಜಿಗಿದರೂ ತಗ್ಗದ ಚಿನ್ನ-ಬೆಳ್ಳಿ: ಮಾ.15ರ ಗೋಲ್ಡ್ ರೇಟ್ ಇಲ್ಲಿದೆ..
ಫೆಬ್ರವರಿಯಲ್ಲಿ ತೈಲ ಆಮದು ಶೇ 16.63ರಷ್ಟು ಕುಸಿದು 8.99 ಬಿಲಿಯನ್ ಡಾಲರ್‌ಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ 11 ತಿಂಗಳ ಅವಧಿಯಲ್ಲಿ ಇದು ಶೇ 40.18ರಷ್ಟು ಇಳಿದು, 72.08 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.