ಕರ್ನಾಟಕ

karnataka

ETV Bharat / business

ಮಂದಗತಿಯ ಜಾಗತಿಕ ಆರ್ಥಿಕತೆ ಎಫೆಕ್ಟ್​​... 3 ವರ್ಷಗಳ ಕನಿಷ್ಠ ಮಟ್ಟಕ್ಕಿಳಿದ ಭಾರತದ ರಫ್ತು..!

ಪೆಟ್ರೋಲಿಯಂ, ಚರ್ಮದ ಉತ್ಪನ್ನಗಳು, ಅಕ್ಕಿ ಮತ್ತು ಟೀ ರಫ್ತು ಪ್ರಮಾಣದಲ್ಲಿ ಕ್ಷೀಣಿಸಿದ್ದು ಒಟ್ಟಾರೆ ರಫ್ತು ವಹಿವಾಟು ಕಡಿಮೆಯಾಗಿ ₹ 1.89 ಲಕ್ಷ ಕೋಟಿಗಳಷ್ಟಾಗಿದೆ. ಆಮದು ವಹಿವಾಟು ಶೇ 16.31ರಷ್ಟು ಕಡಿಮೆಯಾಗಿದ್ದು, ಮೂರು ವರ್ಷಗಳ ಕನಿಷ್ಠ ಮಟ್ಟವಾದ ₹ 2.69 ಲಕ್ಷ ಕೋಟಿಗೆ ತಲುಪಿದೆ. 2016ರ ಜುಲೈ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ರಫ್ತು ವಹಿವಾಟು ಇಳಿಕೆ ಆಗಿತ್ತು.

ರಫ್ತು

By

Published : Nov 17, 2019, 5:37 AM IST

ನವದೆಹಲಿ:ಮಂದಗತಿಯ ಜಾಗತಿಕ ಆರ್ಥಿಕತೆಯ ಪರಿಣಾಮ ದೇಶದ ರಫ್ತು ವಹಿವಾಟು ಅಕ್ಟೋಬರ್​ ತಿಂಗಳಲ್ಲಿ ಶೇ 1.11ರಷ್ಟು ಇಳಿಕೆಯಾಗಿದೆ.

ಪೆಟ್ರೋಲಿಯಂ, ಚರ್ಮದ ಉತ್ಪನ್ನಗಳು, ಅಕ್ಕಿ ಮತ್ತು ಟೀ ರಫ್ತು ಪ್ರಮಾಣದಲ್ಲಿ ಕ್ಷೀಣಿಸಿದ್ದು ಒಟ್ಟಾರೆ ರಫ್ತು ವಹಿವಾಟು ಕಡಿಮೆಯಾಗಿ ₹ 1.89 ಲಕ್ಷ ಕೋಟಿಗಳಷ್ಟಾಗಿದೆ. ಆಮದು ವಹಿವಾಟು ಶೇ 16.31ರಷ್ಟು ಕಡಿಮೆಯಾಗಿದ್ದು, ಮೂರು ವರ್ಷಗಳ ಕನಿಷ್ಠ ಮಟ್ಟವಾದ ₹ 2.69 ಲಕ್ಷ ಕೋಟಿಗೆ ತಲುಪಿದೆ. 2016ರ ಜುಲೈ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ರಫ್ತು ವಹಿವಾಟು ಇಳಿಕೆ ಆಗಿತ್ತು.

ಚಿನ್ನದ ಆಮದು ಶೇ 5ರಷ್ಟು ಏರಿಕೆ ಆಗಿದ್ದು, ₹ 13,248 ಕೋಟಿಗಳಿಗೆ ತಲುಪಿದೆ. ತೈಲ ಆಮದು ಶೇ 32ರಷ್ಟು ಇಳಿಕೆಯಾಗಿದೆ. ಇದರಿಂದ ವ್ಯಾಪಾರ ಕೊರತೆ ಅಂತರವು ₹ 1.29 ಲಕ್ಷ ಕೋಟಿಗಳಿಂದ ₹ 79,200 ಕೋಟಿಗಳಿಗೆ ಇಳಿಕೆಯಾಗಿದೆ. ರಫ್ತು ವಹಿವಾಟು ನಡೆಸುತ್ತಿರುವ ಪ್ರಮುಖ 30 ವಲಯಗಳಲ್ಲಿ 18 ವಲಯಗಳ ಬೆಳವಣಿಗೆ ಕುಸಿದಿದೆ.

ABOUT THE AUTHOR

...view details