ನವದೆಹಲಿ:ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ದಿಢೀರ್ ಕುಸಿದು ಹೂಡಿಕೆದಾರರಿಗೆ ಭಾರಿ ನಷ್ಟ ಉಂಟು ಮಾಡಿದ್ದ ಬಿಎಸ್‌ಇ ಸೆನ್ಸೆಕ್ಸ್ ಇದೀಗ ತನ್ನ ಆರಂಭಿಕ ಹಂತದ ವಹಿವಾಟಿನಲ್ಲಿ 1,329 ಅಂಕ ಅಂದರೆ ಶೇ.2.45 ರಷ್ಟು ಏರಿಕೆ ಕಂಡು ಆಶಾಭಾವನೆ ಮೂಡಿಸಿದೆ. ಇದರ ಜೊತೆಗೆ ನಿಫ್ಟಿ ಕೂಡ ಶೇ.2.51 ರಷ್ಟು, 408 ಅಂಕ ಗಳಿಸುವ ಮೂಲಕ ಉತ್ತಮ ವಹಿವಾಟು ನಡೆಸಿವೆ.
ಗ್ರಾಹಕರ ಧನಾತ್ಮಕ ಹೂಡಿಕೆಯಿಂದಾಗಿ ವ್ಯಾಪಾರ ವಲಯಗಳು, ಗ್ರಾಹಕರ ದೀರ್ಘಾವಧಿ ಹೂಡಿಕೆ ಮತ್ತು ಸರಕುಗಳು ಮತ್ತು ಸೇವೆಗಳ ಚೇತರಿಕೆಯಿಂದಾಗಿ ಮುಂಬೈ ಷೇರುಪೇಟೆ ಏರಿಕೆ ಗತಿಯಲ್ಲಿ ಸಾಗಿದೆ.