ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸದಸ್ಯರ ಸಭೆ ಬಳಿಕ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗವಾರ್ ಮಾತನಾಡಿ, ನೌಕರರ ಭವಿಷ್ಯ ನಿಧಿಯ ಈಗಿನ ಬಡ್ಡಿದರ ಶೇ 8.55 ರಿಂದ ಶೇ 8.65ಕ್ಕೆ ಏರಿಕೆ ಮಾಡಲಾಗಿದೆ. 2018-19ರ ಸಾಲಿನ ಸಂಗ್ರಹ ಮೊತ್ತಕ್ಕೆ ಈ ಬಡ್ಡಿದರ ಅನ್ವಯಿಸಲಿದೆ. 2016ರ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ಏರಿಕೆ ಮಾಡಲಾಗಿದೆ. ಇದರಿಂದ 6 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
6 ಕೋಟಿ ನೌಕರರಿಗೆ ಸಿಹಿ ಹಂಚಿದ ಕೇಂದ್ರ... ಇಪಿಎಫ್ಒ ಬಡ್ಡಿ ದರ ಹೆಚ್ಚಳ - bussiness
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸದಸ್ಯರ ಸಭೆ ಬಳಿಕ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗವಾರ್ ಮಾತನಾಡಿ, ನೌಕರರ ಭವಿಷ್ಯ ನಿಧಿಯ ಈಗಿನ ಬಡ್ಡಿದರ ಶೇ 8.55 ರಿಂದ ಶೇ 8.65ಕ್ಕೆ ಏರಿಕೆ ಮಾಡಲಾಗಿದೆ. 2018-19ರ ಸಾಲಿನ ಸಂಗ್ರಹ ಮೊತ್ತಕ್ಕೆ ಈ ಬಡ್ಡಿದರ ಅನ್ವಯಿಸಲಿದೆ.
ಪರಿಷ್ಕೃತ ಬಡ್ಡಿದರವನ್ನು ಸಿಬಿಟಿ ಅನುಮೋದಿಸಿದ ಬಳಿಕ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆಗೆ ಒಪ್ಪಿಸಿ, ಒಪ್ಪಿಗೆ ಪಡೆದ ನಂತರ ಚಂದಾದಾರ ಖಾತೆಯಲ್ಲಿನ ಹಣಕ್ಕೆ ಅನುಗುಣವಾಗಿ ಬಡ್ಡಿದರ ನೀಡಿಕೆಗೆ ಪರಿಗಣಿಸಲಾಗುತ್ತದೆ.
ಇಪಿಎಫ್ಒನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ ₹ 10 ಲಕ್ಷ ಕೋಟಿಗೂ ಅಧಿಕ ಮೊತ್ತವಿದೆ. ಎನ್ಪಿಎಸ್ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರು ₹ 1.1 ಲಕ್ಷ ಕೋಟಿ ನಿಧಿಯಿದೆ. 2017-2018ರಲ್ಲಿ ಶೇ8.55 ರಷ್ಟು ಬಡ್ಡಿದರ ನೀಡಲಾಗಿತ್ತು. 5 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು. 2016-2017ರಲ್ಲಿ ಬಡ್ಡಿ ದರ ಶೇ 8.65ರಷ್ಟು, 2015-2016ರಲ್ಲಿ ಶೇ 8.8ರಷ್ಟು, 2013-14ರಲ್ಲಿ ಶೇ 8.75ರಷ್ಟು ಹಾಗೂ 2012-13ರಲ್ಲಿ ಶೇ 8.5ರಷ್ಟು ನೀಡಲಾಗುತ್ತಿತ್ತು.
TAGGED:
bussiness