ನವದೆಹಲಿ:2021-22ನೇ ಸಾಲಿನ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರದಲ್ಲಿ ಇಳಿಕೆ ಮಾಡಲಾಗಿದ್ದು, ಶೇ. 8.5ರಿಂದ ಶೇ. 8.1ಕ್ಕೆ ಬಡ್ಡಿ ದರ ಇಳಿಸಲಾಗಿದೆ. ಕಳೆದ ನಾಲ್ಕು ದಶಕದಲ್ಲೇ ಇದು ಕನಿಷ್ಠ ಮಟ್ಟದ ಬಡ್ಡಿ ದರವಾಗಿದೆ. ಇದರಿಂದ ವೇತನದಾರರಿಗೆ ಕಹಿ ಸುದ್ದಿ ಸಿಕ್ಕಿದೆ.
ಗುವಾಹಟಿಯಲ್ಲಿ ನಡೆದ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವೇತನದಾರರಿಗೆ ವಾರ್ಷಿಕವಾಗಿ ಶೇ. 8.1ರಷ್ಟು ಬಡ್ಡಿ ದರ ನೀಡಲು ಶಿಫಾರಸು ಮಾಡಿದೆ. ಕಳೆದ ವರ್ಷದ ಮಾರ್ಚ್ನಲ್ಲಿ ನಡೆದ ಸಭೆಯಲ್ಲಿ 2022-21ನೇ ಸಾಲಿಗೆ ಶೇ. 8.5ರಷ್ಟು ಬಡ್ಡಿ ದರ ಶಿಫಾರಸು ಮಾಡಿತ್ತು. ಆದರೆ, ಈ ಬಾರಿ ಇದರಲ್ಲಿ ಶೇ. 0.4ರಷ್ಟು ಕಡಿತಗೊಳಿಸಿದೆ.