ಕರ್ನಾಟಕ

karnataka

ETV Bharat / business

ಕೊರೊನಾ ಹೊತ್ತಲ್ಲಿ ಮತ್ತೆ EPFOನ ಶೇ 75 ಹಣ ವಿತ್​ಡ್ರಾ: ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ - ಇಪಿಎಫ್​ಒ ಕೋವಿಡ್

ಕೊರೊನಾ ಎರಡನೇ ಅಲೆಯ ಹಂತದಲ್ಲಿ, ಗ್ರಾಹಕರಿಗೆ ನೆರವಾಗಲು ನಾವು ಮರುಪಾವತಿಯ ಎರಡನೇ ಕೋವಿಡ್ ಅಡ್ವಾನ್ಸ್ ನೀಡುತ್ತಿದ್ದೇವೆ. ಈ ವಿಶೇಷ ನಿಬಂಧನೆಯನ್ನು ಕಳೆದ ಮಾರ್ಚ್‌ನಲ್ಲಿ ಘೋಷಿಸಲಾಯಿತು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

EPFO
EPFO

By

Published : May 31, 2021, 5:31 PM IST

ನವದೆಹಲಿ:ದೇಶದಲ್ಲಿ ಎರಡನೇ ಹಂತದ ಕೊರೊನಾ ಪ್ರಕರಣಗಳಿಂದ ಹೆಚ್ಚಿನ ರಾಜ್ಯಗಳು ಈಗ ಲಾಕ್​ಡೌನ್​ ಚೌಕಟ್ಟಿನಡಿ ಸಾಗುತ್ತಿವೆ. ಲಾಕ್‌ಡೌನ್‌ ಮತ್ತು ಕರ್ಫ್ಯೂಗಳು ವಿಧಿಸಲಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕೂಲಿಕಾರರಿಗೆ ಹಾಗೂ ನೌಕರರಿಗೆ ಎದುರಾದ ಆರ್ಥಿಕ ತೊಂದರೆಗಳನ್ನು ಎದುರಿಸಲು ನೆರವಾಗಲು ಹೆಜ್ಜೆ ಹಾಕಿದೆ.

ಮತ್ತೊಮ್ಮೆ ನೌಕರರಿಗೆ ತಮ್ಮ ಇಪಿಎಫ್‌ಒ ಖಾತೆಯಿಂದ ಮುಂಗಡ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಕೇಂದ್ರ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಕೊರೊನಾ ಎರಡನೇ ಅಲೆಯ ಹಂತದಲ್ಲಿ, ಗ್ರಾಹಕರಿಗೆ ನೆರವಾಗಲು ನಾವು ಮರುಪಾವತಿಯ ಎರಡನೇ ಕೋವಿಡ್ ಅಡ್ವಾನ್ಸ್ ನೀಡುತ್ತಿದ್ದೇವೆ. ಈ ವಿಶೇಷ ನಿಬಂಧನೆಯನ್ನು ಕಳೆದ ಮಾರ್ಚ್‌ನಲ್ಲಿ ಘೋಷಿಸಲಾಯಿತು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಇಲ್ಲಿ ಗಮನಿಸಿ: ಸರ್ಕಾರಿ ಬ್ಯಾಂಕ್​ಗಳಿಂದ ಕೊರೊನಾ ಚಿಕಿತ್ಸೆಗೆ 5 ಲಕ್ಷ ರೂ. ತನಕ ಪರ್ಸನಲ್ ಲೋನ್!

ದೇಶಾದ್ಯಂತ ಲಾಕ್‌ಡೌನ್ ಹೇರಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಅನೇಕ ಕಂಪನಿಗಳು ಮುಚ್ಚಲ್ಪಟ್ಟವು. ಕೂಲಿ ಮಾಡುವವರ ಆರ್ಥಿಕ ಅಗತ್ಯಗಳಿಗಾಗಿ ಇಪಿಎಫ್‌ಒ ಈ ಸೌಲಭ್ಯವನ್ನು ತೆರಿಯಿತು. ಉದ್ಯೋಗಿಗಳಿಗೆ ಮೂರು ತಿಂಗಳ ಮೂಲ, ಡಿಎ ಸಂಬಳ ಅಥವಾ ಭವಿಷ್ಯ ನಿಧಿಯ 75 ಪ್ರತಿಶತದಷ್ಟು ಮುಂಚಿತವಾಗಿ ತೆಗೆದುಕೊಳ್ಳಲು ಅನುಮತಿಸಲಾಗಿತ್ತು. ಈಗ ಮತ್ತೊಮ್ಮೆ ಆ ಸೌಲಭ್ಯ ತಂದಿದೆ. ಈಗಾಗಲೇ ಈ ಅವಕಾಶವನ್ನು ಬಳಸಿಕೊಂಡವರು ಎರಡನೇ ಬಾರಿಗೆ ಮುಂಗಡ ತೆಗೆದುಕೊಳ್ಳಬಹುದು ಎಂದು ಘೋಷಿಸಿದೆ.

ವೈದ್ಯಕೀಯ, ಮಕ್ಕಳ ಶಿಕ್ಷಣ, ಮನೆ ಖರೀದಿಯಂತಹ ಸಾಮಾನ್ಯ ಅಗತ್ಯಗಳಿಗೆ ಇಪಿಎಫ್‌ಒ ಗ್ರಾಹಕರು ಮರುಪಾವತಿಸಲಾಗದ ಮುಂಗಡ ತೆಗೆದುಕೊಳ್ಳಬಹುದು.

ಗಮನಿಸಬೇಕಾದ ಅಂಶಗಳು:

  • ಭವಿಷ್ಯ ನಿಧಿ ಖಾತೆಯಲ್ಲಿರುವ ಶೇ 75ರಷ್ಟು ಹಣ ಅಥವಾ ನಿಮ್ಮ ಮೂಲ ವೇತನದ 3 ತಿಂಗಳ ಮೊತ್ತ+ ಡಿಎ ಇವೆರಡರಲ್ಲಿ ಯಾವುದು ಕಡಿಮೆಯೋ, ಆ ಮೊತ್ತ ಪಡೆಯಬಹುದು.
  • ಅರ್ಜಿಯನ್ನು ಇಪಿಎಫ್ಒ ವೆಬ್‌ಸೈಟ್‌ ಮೂಲಕ ಸಲ್ಲಿಸಬೇಕು.
  • ಒಂದು ವೇಳೆ ಈಗಾಗಲೇ ಬೇರೆ ಯಾವುದೋ ಕಾರಣಕ್ಕೆ ಹಣ ಪಡೆಯಲು ಅರ್ಜಿ ಸಲ್ಲಿಸಿರಬಹುದು. ಅದರ ಜೊತೆಗೆ ಕೋವಿಡ್‌-19 ಅರ್ಜಿ ಮೂಲಕವೂ ಹಣ ಪಡೆಯಲು ಅಡ್ಡಿಯಿಲ್ಲ

ಭವಿಷ್ಯ ನಿಧಿಯ ಅರ್ಜಿ ಸಲ್ಲಿಕೆ ಹೇಗೆ?

  • https://unifiedportalmem.epfindia.gov.in/memberinterface ವೆಬ್‌ಸೈಟ್‌ನಲ್ಲಿ ಲಾಗ್‌ಇನ್‌ ಆಗಿ
  • ಆನ್‌ಲೈನ್‌ ಸರ್ವಿಸಸ್‌-ಕ್ಲೈಮ್‌ (ಫಾರ್ಮ್ 31, 19, 10ಸಿ, 10ಡಿ) ಬಟನ್ ಕ್ಲಿಕ್​ ಮಾಡಿ
  • ಬ್ಯಾಂಕ್‌ ಖಾತೆ ಸಂಖ್ಯೆ ಒತ್ತಿ ಪರಿಶೀಲಿಸಿ
  • ಪ್ರೊಸೀಡ್‌ ಫಾರ್‌ ಆನ್‌ಲೈನ್‌ ಕ್ಲೈಮ್‌ ಬಟನ್ ಕ್ಲಿಕ್​ ಮಾಡಿ
  • ಪಿಎಫ್ ಅಡ್ವಾನ್ಸ್‌ ಬಟನ್​ ಒತ್ತಿ
  • ಔಟ್‌ಬ್ರೇಕ್‌ ಆಫ್ ಪ್ಯಾಂಡೆಮಿಕ್‌ (ಕೋವಿಡ್‌-19) ಆಯ್ಕೆ ಒತ್ತಿ
  • ಬೇಕಾದ ಹಣದ ಮೊತ್ತ, ಸ್ಕ್ಯಾನ್‌ ಮಾಡಿದ ಚೆಕ್‌ ಚಿತ್ರ, ವಿಳಾಸ ಭರ್ತಿ ಮಾಡಿ
  • ಗೆಟ್‌ ಆಧಾರ್‌ ಒಟಿಪಿ ಆಯ್ಕೆ ಮಾಡಿ
  • ಒನ್‌ಟೈಮ್‌ ಪಾಸ್‌ವರ್ಡ್‌ (ಒಟಿಪಿ ) ನಮೂದಿಸಿ

ABOUT THE AUTHOR

...view details