ಕರ್ನಾಟಕ

karnataka

ETV Bharat / business

'ಕಾರ್ಬನ್​ ರಿಮೂವಲ್​ ಕಂಟೆಸ್ಟ್': ವಿಜೇತರಿಗೆ $100 ಮಿಲಿಯನ್ ಬಹುಮಾನ ಘೋಷಿಸಿದ ಎಲಾನ್​ ಮಸ್ಕ್ - ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್

ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇಂಗಾಲ ಹೊರಸೂಸುವಿಕೆ ತಡೆ ಸ್ಪರ್ಧೆಗೆ 100 ಮಿಲಿಯನ್ ಯುಎಸ್​ ಡಾಲರ್​ ಹೂಡಿಕೆ ಮಾಡಿದ್ದಾರೆ. 18 ತಿಂಗಳೊಳಗೆ ಹದಿನೈದು ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.

ಎಲಾನ್​ ಮಸ್ಕ್
ಎಲಾನ್​ ಮಸ್ಕ್

By

Published : Feb 9, 2021, 5:42 PM IST

ಸ್ಯಾನ್ ಫ್ರಾನ್ಸಿಸ್ಕೋ: ಇಂಗಾಲ ತಡೆಯುವ ಯಂತ್ರವನ್ನು ಪರಿಶೋಧಿಸುವ ಸಲುವಾಗಿ ಎಕ್ಸ್‌ಪ್ರೈಜ್ ಫೌಂಡೇಶನ್ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಫರ್ಧೆಗೆ ಟೆಸ್ಲಾ ಸಿಇಒ ಎಲಾನ್​ ಮಸ್ಕ್​​ 100 ಮಿಲಿಯನ್​ ಯುಸ್​ ಡಾಲರ್​ ಹಣವನ್ನು ಹೂಡಿಕೆ​ ಮಾಡಿದ್ದಾರೆ.

'ಕಾರ್ಬನ್​ ರಿಮೂವಲ್​ ಕಂಟೆಸ್ಟ್​' (ಇಂಗಾಲ ಹೊರಸೂಸುವಿಕೆ ತಡೆ) ಸ್ಪರ್ಧೆಯೂ ನಾಲ್ಕು ವರ್ಷಗಳ ಕಾಲ ನಡೆಯಲಿದೆ. ಈ ಸ್ಪರ್ಧೆಗೆ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. 18 ತಿಂಗಳೊಳಗೆ ಹದಿನೈದು ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಮತ್ತು ಅವರಿಗೆ ತಲಾ $ 1 ಮಿಲಿಯನ್ ಮತ್ತು ಪ್ರವೇಶಿಸುವ ವಿದ್ಯಾರ್ಥಿ ತಂಡಗಳಿಗೆ ಪ್ರತ್ಯೇಕ $ 200,000 ವಿದ್ಯಾರ್ಥಿವೇತನ ನೀಡಲಾಗುವುದು.

ಬಹುಮಾನ ವಿಜೇತರಿಗೆ 50 ಮಿಲಿಯನ್ ಯುಎಸ್​ ಡಾಲರ್​, ಎರಡನೇ ಸ್ಥಾನಕ್ಕೆ 20 ಮಿಲಿಯನ್ ಮತ್ತು ಮೂರನೇ ಸ್ಥಾನಕ್ಕೆ 10 ಮಿಲಿಯನ್ ಯುಡ್​ ಡಾಲರ್​ ನೀಡಲಾಗುವುದು ಎಂದು ದಿ ವರ್ಜ್ ವರದಿ ಮಾಡಿದೆ.

ಓದಿ:ಡೌನ್‌ಗ್ರೇಡ್ ವಾಹನಗಳ ಮಾರಾಟ ನಿಲ್ಲಿಸಿ: ವಾಹನ ತಯಾರಕರಿಗೆ ಸರ್ಕಾರದ ಸೂಚನೆ

ನಾವು ಅರ್ಥಪೂರ್ಣವಾದ ನೆರವು ನೀಡಲು ಬಯಸುತ್ತೇವೆ. ಕಾರ್ಬನ್​ನ ಪರಿಣಾಮಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಇದು ಸೈದ್ಧಾಂತಿಕ ಸ್ಪರ್ಧೆಯಲ್ಲ. ನೈಜ ವ್ಯವಸ್ಥೆಗಳನ್ನು ನಿರ್ಮಿಸುವ ತಂಡಗಳನ್ನು ನಾವು ಕಟ್ಟ ಬಯಸುತ್ತೇವೆ ಎಂದು ಮಸ್ಕ್ ಹೇಳಿದ್ದಾರೆ.

ಎಕ್ಸ್‌ಪ್ರೈಜ್ ಫೌಂಡೇಶನ್‌ನ ಪ್ರಕಾರ ವಿಜೇತರು "ವಾತಾವರಣದಿಂದ ಅಥವಾ ಸಾಗರಗಳಿಂದ ನೇರವಾಗಿ ಇಂಗಾಲದ ಡೈಆಕ್ಸೈಡ್​ನನ್ನು ಹೀರುವ ಮತ್ತು ಅದನ್ನು ಪರಿಸರಕ್ಕೆ ಹಾನಿಕರವಲ್ಲದ ರೀತಿಯಲ್ಲಿ ಶಾಶ್ವತವಾಗಿ ಹಿಡಿದಿಟ್ಟುಕೊಳ್ಳುವ ಯಂತ್ರವನ್ನು ಕಂಡುಹಿಡಿಯಬೇಕಾಗುತ್ತದೆ" ಎಂದು ಇದೇ ವೇಳೆ ಅವರು ಪ್ರತಿಪಾದಿಸಿದ್ದಾರೆ.

ABOUT THE AUTHOR

...view details