ಸ್ಯಾನ್ಫ್ರಾನ್ಸಿಸ್ಕೋ: ಟೆಸ್ಲಾ ಸಿಇಒ ಈಲೋನ್ ಮಸ್ಕ್, ಟೆಸ್ಲಾ ಕಂಪನಿಯ ದೀರ್ಘ ಶ್ರೇಣಿಯ ಮಾಡೆಲ್ ಎಸ್ ಪ್ಲೈಡ್ ರದ್ದುಪಡಿಸಲಾಗಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಾಡೆಲ್ ಎಸ್ ಪ್ಲೈಡ್ ಅನ್ನು ಅತ್ಯಂತ ವೇಗದ ಕಾರು ಎಂದು ಅವರು ಕರೆದಿದ್ದಾರೆ.
520 ಮೈಲಿಗಳ ಚಾಲನಾ ಶ್ರೇಣಿ ಹೊಂದಿರುವ ಟೆಸ್ಲಾದ ಅತ್ಯುನ್ನತ ಮಾದರಿಯೆಂದು ಹೆಸರಿಸಲಾದ ಮಾಡೆಲ್ ಎಸ್ ಪ್ಲೈಡ್ ಅನ್ನು ಕಳೆದ ವರ್ಷದ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಳಿಸಲಾಯಿತು. ಮಸ್ಕ್ ತನ್ನ ಮುಂದಿನ ಪೀಳಿಗೆಯ 4,680 ಬ್ಯಾಟರಿ ಸೆಲ್ಗಳನ್ನು ಅಳವಡಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ, ಉತ್ಪಾದನೆಯನ್ನು 2021ರ ಅಂತ್ಯದಿಂದ 2022ಕ್ಕೆ ನಿಗದಿಪಡಿಸಲಾಗಿತ್ತು.
ಇದನ್ನೂ ಓದಿ: ಷೇರು ಮಾರುಕಟ್ಟೆ ಸಮಾಚಾರ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 150 ಅಂಕ ಹೆಚ್ಚಳ
ಕಂಪನಿಯ ವೆಬ್‌ಸೈಟ್ ಪ್ರಕಾರ, ಮಾಡೆಲ್ ಎಸ್ ಪ್ಲೈಡ್ 1.99 ಸೆಕೆಂಡುಗಳಲ್ಲಿ ಗಂಟೆಗೆ ಶೂನ್ಯದಿಂದ 60 ಮೈಲುಗಳವರೆಗೆ (96.56 ಕಿ.ಮೀ) ಹೋಗಬಹುದು. ಗಂಟೆಗೆ 200 ಮೈಲಿ ವೇಗವನ್ನು ಹೊಂದಿರಲಿದೆ. ಅಂದಾಜು 390 ಮೈಲಿಗಳ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದಿತ್ತು.
ಮಾಡೆಲ್ ಎಸ್ ಈ ವಾರ ಪ್ಲೈಡ್ ವೇಗಕ್ಕೆ ಮುನ್ನಗಲಿದೆ ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಜೂನ್ 3ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾಡೆಲ್ ಎಸ್ ಪ್ಲೈಡ್ ಅನ್ನು ಅನಾವರಣಗೊಳಿಸಲು ನಿರ್ಧರಿಸಲಾಗಿತ್ತು. ಇದನ್ನು ಜೂನ್ 10ಕ್ಕೆ ಮುಂದೂಡಲಾಗಿದೆ. ಮಾಡೆಲ್ ಎಸ್ ಪ್ಲೈಡ್ ಬೆಲೆ 1,12,990 ಡಾಲರ್ ಎಂದು ಕಂಪನಿಯ ವೆಬ್‌ಸೈಟ್ ತಿಳಿಸಿದೆ.