ಹೈದರಾಬಾದ್:ನಾವು ದಿನಕ್ಕೆ ಎಷ್ಟು ಸಂಪಾದಿಸುತ್ತೇವೆ. 500 ರೂ., 1000 ರೂ., 2000 ರೂಪಾಯಿ ಸಂಪಾದಿಸಬಹುದು. ದಿನಕ್ಕೆ 5 ರಿಂದ 10 ಸಾವಿರ ಗಳಿಸಿದರೆ ಇಷ್ಟೊಂದಾ? ಎಂದು ಕೆಲವರು ಅಚ್ಚರಿಯಿಂದ ನೋಡ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ದಿನ ಲಕ್ಷ ಅಲ್ಲ, ಕೋಟಿ ಅಲ್ಲ, ಬರೋಬ್ಬರಿ ಎರಡೂವರೆ ಲಕ್ಷ ಕೋಟಿ ರೂಪಾಯಿ ಗಳಿಸಿದ್ದಾನೆ.
ಟೆಸ್ಲಾ, ಸ್ಪೇಸ್‌ಎಕ್ಸ್ ಕಂಪನಿಗಳ ಸಿಇಒ ಎಲಾನ್ ಮಸ್ಕ್ ಇಂತಹದೊಂದು ಅಪರೂಪದ ಸಾಧನೆ ಮಾಡಿ ತೋರಿಸಿದ್ದಾರೆ. ಒಂದೇ ದಿನದಲ್ಲಿ ಅವರು ಮಸ್ಕ್ ಟೆಸ್ಲಾ ಷೇರುಗಳಿಂದ 2.71 ಲಕ್ಷ ಕೋಟಿ ರೂಪಾಯಿ (2,71,50,00,000,000 ರೂಪಾಯಿ) ಸಂಪಾದಿಸಿದ್ದಾರೆ. ಹೀಗೆ ಅವರ ಸಂಪತ್ತು ಒಂದೇ ದಿನ ಹೆಚ್ಚಲು ಅವರು ಮಾಡಿಕೊಂಡಿರುವ ಒಪ್ಪಂದವೇ ಕಾರಣ.
ಸೋಮವಾರ ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ 1 ಲಕ್ಷ ಟೆಸ್ಲಾಗಳಿಗೆ ಆರ್ಡರ್ ಮಾಡಿದ ನಂತರ ಟೆಸ್ಲಾ ಷೇರುಗಳು ಮೌಲ್ಯ ಶೇ. 14.9 ರಷ್ಟು ಏರಿಕೆಯಾಗಿ 1,045.02 ಡಾಲರ್‌ಗೆ ತಲುಪಿದೆ. ಸದ್ಯ ಟೆಸ್ಲಾ ವಿಶ್ವದ ಅತ್ಯಂತ ಮೌಲ್ಯಯುತ ಆಟೋಮೊಬೈಲ್ ಕಂಪನಿಯಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.