ಹೈದರಾಬಾದ್:ಸ್ಪೇಸ್ಎಕ್ಸ್, ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಅವರನ್ನು ಅಮೆರಿಕದ ಟೈಮ್ ಮ್ಯಾಗಜಿನ್ 'ವರ್ಷದ ವ್ಯಕ್ತಿ' ಎಂದು ಘೋಷಿಸಿದೆ. ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಸ್ವತಃ ಮನೆ ಹೊಂದಿಲ್ಲದೇ ಇರುವುದು ಸೋಜಿಗ ಎಂದು ಕೂಡ ಬಣ್ಣಿಸಿದೆ.
ಎಲಾನ್ ಮಸ್ಕ್ ಸರ್ಕಾರಕ್ಕೆ ತೆರಿಗೆ ಬಾಕಿ ಕಟ್ಟಲು ಇತ್ತೀಚೆಗೆ ತನ್ನ ಷೇರುಗಳನ್ನು ಮಾರಾಟ ಮಾಡಿ ಸುದ್ದಿಯಾಗಿದ್ದ. ಇದೀಗ ಟೈಮ್ ನಿಯತಕಾಲಿಕೆ 2021ನೇ ಸಾಲಿನ ವರ್ಷದ ವ್ಯಕ್ತಿ ಪಟ್ಟ ನೀಡಿದೆ. ಅಲ್ಲದೇ, ತನ್ನ ಮುಖಪುಟದಲ್ಲಿ ಎಲಾನ್ ಮಸ್ಕ್ ಅವರನ್ನು ಫೋಟೋವನ್ನು ಮುದ್ರಿಸಿದೆ.
ಎಲಾನ್ ಮಸ್ಕ್ ಬಗ್ಗೆ ಗುಣಗಾನ ಮಾಡಿರುವ ಟೈಮ್, ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ, ಸೌರಶಕ್ತಿಯನ್ನು ಅತಿ ಹೆಚ್ಚಾಗಿ ಬಳಸಿಕೊಳ್ಳುವ, ಇಂಧನ ರಹಿತ, ಚಾಲಕ ರಹಿತ ಕಾರನ್ನು ಓಡಿಸುವ ವ್ಯಕ್ತಿ ಎಲಾನ್ ಆಗಿದ್ದಾರೆ.
ತಮ್ಮ ಬೆರಳಿನಿಂದ ಷೇರು ಮಾರುಕಟ್ಟೆಯನ್ನು ಗಗನಕ್ಕೇರಿಸುತ್ತಾರೆ ಮತ್ತು ಪಾತಾಳಕ್ಕೂ ಒಯ್ಯುತ್ತಾರೆ. ಎಲಾನ್ ಮಾತು ಕೇಳಿಸಿಕೊಳ್ಳಲು ಅದೆಷ್ಟೋ ಜನರು ಕಾತುರದಿಂದ ಕಾಯುತ್ತಾರೆ. ಮಂಗಳ ಗ್ರಹದ ಕನಸು ಕಾಣುವ ವ್ಯಕ್ತಿಯಾಗಿದ್ದಾರೆ ಎಂದೆಲ್ಲಾ ಮಾಗಜಿನ್ ಬಣ್ಣಿಸಿದೆ.
ಬಹುಮುಖ ಪ್ರತಿಭೆ, ದಾರ್ಶನಿಕ, ಕೈಗಾರಿಕೋದ್ಯಮಿ, ಶೋಮ್ಯಾನ್ ಅಲ್ಲದೇ, ಥಾಮಸ್ ಎಡಿಸನ್, ಪಿಟಿ ಬರ್ನಮ್ ಸೇರಿದಂತೆ ವಿವಿಧ ಪ್ರತಿಭೆಗಳ ಮಿಶ್ರಣದಂತಿದ್ದಾನೆ. ನೀಲಿ ಚರ್ಮದ ಈ ಮನುಷ್ಯ ಎಲೆಕ್ಟ್ರಿಕ್ ಕಾರುಗಳನ್ನು ಮಂಗಳನ ಅಂಗಳಕ್ಕೆ ಒಯ್ಯಲು ಹವಣಿಸುತ್ತಿದ್ದಾನೆ ಎಂದಿದೆ ಟೈಮ್ ನಿಯತಕಾಲಿಕೆ.
ಇದನ್ನೂ ಓದಿ: ಗಂಗಾನದಿ ತಟದಲ್ಲಿ ನಡೆದ 'ಗಂಗಾ ಆರತಿ' ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ಮುಂದುವರಿದು, ಸ್ಟಾರ್ಟ್ಅಪ್ ರಾಕೆಟ್ ಕಂಪನಿ, ಸ್ಪೇಸ್ಎಕ್ಸ್, ಬೋಯಿಂಗ್ ಅಮೆರಿಕದ ಬಾಹ್ಯಾಕಾಶ ಭವಿಷ್ಯವನ್ನು ಕದಿಯಲು ಮುನ್ನುಗ್ಗುತ್ತಿವೆ. ವಾಹನ(ಕಾರು) ಕಂಪನಿ, ಟೆಸ್ಲಾ, ಕೋಟ್ಯಂತರ ರೂಪಾಯಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯನ್ನು 2/3 ವ್ಯಾಪಿಸಿವೆ. ಇವುಗಳ ಬೆಲೆ 250 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವುದು ಎಲಾನ್ಅವರನ್ನು ಜಗತ್ತಿನ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿವೆ ಎಂದು ನಿಯತಕಾಲಿಕೆ ಬರೆದುಕೊಂಡಿದೆ.