ನವದೆಹಲಿ:ದೇಶಾದ್ಯಂತ ಕೊರೊನಾ ಮಹಾಮಾರಿ ಅಬ್ಬರ ಜೋರಾಗಿರುವ ಕಾರಣ ಅನೇಕ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜನಸಾಮಾನ್ಯರು ಕೆಲಸವಿಲ್ಲದೇ ತೊಂದರೆಗೊಳಗಾಗಿದ್ದಾರೆ. ಈ ಮಧ್ಯೆ ಗಾಯದ ಮೇಲೆ ಬರೆ ಎಂಬ ರೀತಿಯಲ್ಲಿ ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿವೆ.
ತೈಲ ಬೆಲೆ ಹಾಗೂ ಎಲ್ಪಿಜಿ ಸಿಲಿಂಡರ್ ದರ ಇದೀಗ ದ್ವಿಗುಣಗೊಂಡಿವೆ. ಕಳೆದ ಎರಡು ವರ್ಷಗಳಲ್ಲೇ ಇವುಗಳ ಬೆಲೆ ದುಪ್ಪಟ್ಟು ಆಗಿದೆ. 2019ರ ಮೇ ತಿಂಗಳಲ್ಲಿ ಲೀಟರ್ ಸಾಸಿವೆ ಎಣ್ಣೆ 90 ರೂ. ಇತ್ತು. ಆದರೆ ಇದೀಗ 190 ರೂ, ಆಗಿದ್ದು, ಅಕ್ಕಿ ಎಣ್ಣೆ ಬೆಲೆ ಕೂಡ ಎರಡರಷ್ಟಾಗಿದೆ. 2019ರಲ್ಲಿ ಎಲ್ಪಿಜಿ ಬೆಲೆ 499ರಷ್ಟಿತ್ತು. ಆದರೆ ಇದೀಗ 835 ರೂ.ಗೆ ತಲುಪಿದೆ.