ಮುಂಬೈ: ಕೋವಿಡ್ -19ನಿಂದ ಆರಂಭದಲ್ಲಿ ಕುಸಿತವಾಗಿದ್ದ ದೇಶದ ಆರ್ಥಿಕತೆ ಇದೀಗ ನಿರೀಕ್ಷೆಗಿಂತ ಹೆಚ್ಚು ಚೇತರಿಸಿಕೊಳ್ಳುತ್ತಿದೆ. ಹಬ್ಬಗಳು ಮುಗಿದ ಬಳಿಕವೂ ಬೇಡಿಕೆ ಇದೇ ರೀತಿ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ ಹೇಳಿದ್ದಾರೆ.
ವಿದೇಶಿ ವಿನಿಮಯ ಮಾರಾಟಗಾರರ ಸಂಘದ (FEDAI) ವಾರ್ಷಿಕ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ದಾಸ್, ವಿಶ್ವಾದ್ಯಂತ ಮತ್ತು ಭಾರತದಲ್ಲಿಯೂ ಆರ್ಥಿಕತೆಯ ಬೆಳವಣಿಗೆಗೆ ತುಂಬಾ ತೊಂದರೆಯುಂಟಾಗುತ್ತಿದೆ ಎಂದರು.
ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ.23.9ರಷ್ಟು ಇದ್ದು, ಹಣಕಾಸು ವರ್ಷ 21ರಲ್ಲಿ ಆರ್ಥಿಕತೆಯು ಶೇ.9.5 ರಷ್ಟು ಕುಗ್ಗುತ್ತದೆ ಎಂದು ಆರ್‌ಬಿಐ ನಿರೀಕ್ಷಿಸಿತ್ತು. ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿದ ಕಾರಣ ಹಾಗೂ ಹಬ್ಬಗಳು ಬಂದಿದ್ದರಿಂದ ಆರ್ಥಿಕತೆ ಸ್ವಲ್ಪ ಚೇತರಿಕೆ ಕಂಡಿದೆ ಎಂದರು.
ಕ್ವಾರ್ಟರ್ (Q1) ರಲ್ಲಿ ಆರ್ಥಿಕತೆಯಲ್ಲಿ ಶೇ.23.9ರಷ್ಟು ಕುಗ್ಗಿತ್ತು, ಕ್ವಾರ್ಟರ್(Q2) ರಲ್ಲಿ ಭಾರತದ ಆರ್ಥಿಕತೆಯು ಚೇತರಿಕೆಯನ್ನು ಕಂಡಿದೆ. ಹಬ್ಬಗಳ ನಂತರ ಬೇಡಿಕೆಯೂ ಇದೇ ರೀತಿ ಇರುವಂತೆ ಮತ್ತು ಲಸಿಕೆ ಮಾರುಕಟ್ಟೆಗೆ ಬರಲಿದ್ದು, ಇದರ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ದಾಸ್ ಹೇಳಿದರು.