ಭುವನೇಶ್ವರ(ಒಡಿಶಾ):ದೇಶದಲ್ಲಿ ಏಕಾಏಕಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಈಸ್ಟ್ ಕೋಸ್ಟ್ ರೈಲ್ವೆ ತನ್ನ 261 ಸ್ಲೀಪರ್ ಕೋಚ್ ಮತ್ತು ಜನರಲ್ ಬೋಗಿಗಳನ್ನು "ಕೋವಿಡ್ -19 ಐಸೊಲೇಷನ್ ಬೋಗಿಗಳಾಗಿ" ಪರಿವರ್ತಿಸುವ ಗುರಿಯನ್ನು ಪೂರೈಸಿದೆ.
ಭಾರತೀಯ ರೈಲ್ವೆಯು ತನ್ನ 5000 ಬೋಗಿಗಳನ್ನು ಕ್ಯಾರಂಟೈನ್ ಅಥವಾ ಐಸೊಲೇಷನ್ ಕೇಂದ್ರಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದು, ಇದು ಮೊದಲನೇ ಹೆಜ್ಜೆಯಾಗಿದೆ. ಇನ್ನೂ ಈ ಕೋವಿಡ್ -19 ಐಸೋಲೇಷನ್ ಬೋಗಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಒಬ್ಬ ವ್ಯಕ್ತಿಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ.