ನವದೆಹಲಿ :ಕೋವಿಡ್-19 ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆ ಇ-ಕಾಮರ್ಸ್ ಕ್ಷೇತ್ರವು ದೇಶದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡಬಲ್ಲದು ಎಂದು ಸಂಶೋಧನಾ ಸಂಸ್ಥೆ ಕಿಯುಟಿಎಸ್ ಇಂಟರ್ನ್ಯಾಷನಲ್ ತಿಳಿಸಿದೆ.
ಪ್ರಪಂಚದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಜಾರಿಗೆ ತರಲಾಗಿರುವ ಲಾಕ್‌ಡೌನ್, ಗ್ರಾಹಕರ ಆನ್‌ಲೈನ್ ಖರೀದಿ ಆಯ್ಕೆಗಳನ್ನು ಅನ್ವೇಷಿಸುವ ಅಗತ್ಯವಿದೆ. ಇ-ಕಾಮರ್ಸ್ ವಾಹಕವಾಗಿ ಇನ್ನೂ ಮೇಲ್ಮುಖವಾಗಿ ಜಿಗಿಯಬೇಕಿದೆ. ವಿವಿಧ ದೇಶಗಳಲ್ಲಿ ಇ-ಕಾಮರ್ಸ್ ಇನ್ನೂ ಬೆಳೆಯುವ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಅವಕಾಶ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೀಮಿತ ಪ್ರಮಾಣದ ಸಾಮಾಜಿಕ ಅಂತರದ ಅನುಷ್ಠಾನಕ್ಕೆ ಇ-ಕಾಮರ್ಸ್ ಬೆಂಬಲ ನೀಡುತ್ತದೆ. ಯುನೈಟೆಡ್ ನೇಷನ್ಸ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಯುನಿಡೋ) ಮತ್ತು ಸಿಯುಟಿಎಸ್ ಇಂಟರ್ನ್ಯಾಷನಲ್ ಗ್ರಾಹಕರ ಸಬಲೀಕರಣಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದೆ.
ಕೊರೊನಾ ಸಾಂಕ್ರಾಮಿಕವು ಜನರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿದೆ. ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಪರಸ್ಪರ ಬೆಂಬಲ ಮತ್ತು ನವೀನ ಪರಿಹಾರಗಳನ್ನು ಒಟ್ಟಾಗಿ ಕಂಡುಕೊಂಡು ಸೋಂಕು ಎದುರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.