ಪುಣೆ:ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) ₹ 7,200 ಕೋಟಿ ಮೀರಿದ ಅಧಿಕ ಬಡ್ಡಿಯನ್ನು ಪಾವತಿಸುವಂತೆ ಸಾಲ ವಸೂಲಾತಿ ನ್ಯಾಯ ಮಂಡಳಿಯು (ಡಿಆರ್ಟಿ) ದೇಶ ಭ್ರಷ್ಟ ಆರ್ಥಿಕ ಅಪರಾಧಿ ನೀರವ್ ಮೋದಿ ಹಾಗೂ ಆತನ್ ಸಹಚರರಿಗೆ ಆದೇಶಿಸಿದೆ.
ಸದ್ಯ ನೀರವ್, ಲಂಡನ್ ಜೈಲಿನಲ್ಲಿ ವಿಚಾರಣಾ ಖೈದಿಯಾಗಿದ್ದಾರೆ. ಹೆಚ್ಚಿನ ವಿಚಾರಣೆಗೆ ಭಾರತಕ್ಕೆ ಹಸ್ತಾಂತರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಲಂಡನ್ ಕೋರ್ಟ್ಗೆ ಮನವಿ ಸಲ್ಲಿಸಿಕೊಂಡು ಬರುತ್ತಿದ್ದು, ಈತನಿಗಾಗಿ ಮುಂಬೈನಲ್ಲಿ ಜೈಲು ಕೋಣೆಯನ್ನೂ ಸಿದ್ಧಪಡಿಸಿದೆ.